ಆಸ್ಟ್ರೇಲಿಯದಲ್ಲಿ ವಿಮಾನ ಪತನ: ಅಮೆರಿಕದ ಮೂವರು ಸೈನಿಕರು ಮೃತ್ಯು, ಇತರ 20 ಮಂದಿಗೆ ಗಾಯ

ಸಾಂದರ್ಭಿಕ ಚಿತ್ರ, Photo: ANI
ಕ್ಯಾನ್ ಬೆರ್ರಾ, ಆ.27: ಅಮೆರಿಕದ ಮೆರೈನ್ ಕಾರ್ಪ್ಸ್ ವಿಮಾನವು ಉತ್ತರ ಆಸ್ಟ್ರೇಲಿಯದ ದ್ವೀಪದಲ್ಲಿ ರವಿವಾರ ಪತನಗೊಂಡಿದ್ದು, ಬಹುರಾಷ್ಟ್ರೀಯ ತರಬೇತಿ ಕಾರ್ಯಕ್ರಮದ ವೇಳೆ ಮೂವರು ಸೈನಿಕರು ಮೃತಪಟ್ಟಿದ್ದು , 20 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಲ್ ಬೋಯಿಂಗ್ V-22 ಓಸ್ಪ್ರೇ ಟಿಲ್ಟ್ರೋಟರ್ ವಿಮಾನವು ಸುಮಾರು ಬೆಳಗ್ಗೆ 9:30 ರ ಸುಮಾರಿಗೆ ಅಪಘಾತಕ್ಕೀಡಾಗಿದ್ದು, ಮೆಲ್ವಿಲ್ಲೆ ದ್ವೀಪದಲ್ಲಿ ಮೂವರು ಸಾವನ್ನಪ್ಪಿದ್ದಾರೆ ಹಾಗೂ ವಿಮಾನದಲ್ಲಿದ್ದ 23 ರಲ್ಲಿ ಐವರು ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆಗಾಗಿ ಡಾರ್ವಿನ್ ಮುಖ್ಯ ನಗರಕ್ಕೆ ಕಳುಹಿಸಲಾಗಿದೆ ಎಂದು ಸೇನಾಪಡೆಯ ಹೇಳಿಕೆ ತಿಳಿಸಿದೆ.
ರಕ್ಷಣಾ ಕಾರ್ಯಾಚರಣೆಯ ಪ್ರಯತ್ನಗಳು ನಡೆಯುತ್ತಿವೆ, ಅಪಘಾತದ ಕಾರಣವನ್ನು ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿಕೆ ತಿಳಿಸಿದೆ.
ಗಾಯಗೊಂಡವರನ್ನು ದೂರದ ಸ್ಥಳದಿಂದ ಕರೆತರಲು ಹೆಲಿಕಾಪ್ಟರ್ಗಳು ಮತ್ತು ಸ್ಥಿರ-ವಿಂಗ್ ವಿಮಾನಗಳನ್ನು ನಿಯೋಜಿಸಲಾಗಿದೆ ಎಂದು ಉತ್ತರ ಪ್ರಾಂತ್ಯದ ಪೊಲೀಸ್ ಕಮಿಷನರ್ ಮೈಕೆಲ್ ಮರ್ಫಿ ಹೇಳಿದ್ದಾರೆ.
ಗಾಯಗೊಂಡವರಲ್ಲಿ ಒಬ್ಬರು ರಾಯಲ್ ಡಾರ್ವಿನ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ನಾರ್ತ್ ಟೆರಿಟೆರಿಯ ಚೀಫ್ ಮಿನಿಸ್ಟರ್ ನಟಾಶಾ ಫೈಲ್ಸ್ ಅವರು ಅಪಘಾತದ ಸುಮಾರು ಆರು ಗಂಟೆಗಳ ನಂತರ ಹೇಳಿದರು.
ಕೆಲವರು ತೀವ್ರವಾಗಿ ಗಾಯಗೊಂಡಿದ್ದಾರೆ ಮತ್ತು ಡಾರ್ವಿನ್ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಅವರನ್ನು ಪರೀಕ್ಷಿಸಲಾಗುತ್ತಿದೆ ಎಂದು ಅವರು ಹೇಳಿದರು.







