ವೆನೆಝುವೆಲಾದಿಂದ ಅಮೆರಿಕಕ್ಕೆ ಮಾರುಕಟ್ಟೆ ದರದಲ್ಲಿ 50 ದಶಲಕ್ಷ ಬ್ಯಾರಲ್ ತೈಲ: ಟ್ರಂಪ್

ಡೊನಾಲ್ಡ್ ಟ್ರಂಪ್ | Photo Credit : AP \ PTI
ವಾಷಿಂಗ್ಟನ್: ವೆನೆಝುವೆಲಾ ಮಧ್ಯಂತರ ಸರ್ಕಾರ 30 ರಿಂದ 50 ದಶಲಕ್ಷ ಬ್ಯಾರಲ್ ಉತ್ತಮ ಗುಣಮಟ್ಟದ ತೈಲವನ್ನು ಅಮೆರಿಕಕ್ಕೆ ಮಾರಾಟ ಮಾಡಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಟ್ರುಥ್ ಸೋಶಿಯಲ್ ನಲ್ಲಿ ಪ್ರಕಟಿಸಿದ್ದಾರೆ.
"ಈ ಯೋಜನೆಯನ್ನು ತಕ್ಷಣವೇ ಜಾರಿಗೊಳಿಸುವಂತೆ ಇಂಧನ ಕಾರ್ಯದರ್ಶಿ ಕ್ರಿಸ್ ರಿಟ್ ಅವರಿಗೆ ಸೂಚಿಸಿದ್ದೇನೆ" ಎಂದು ಟ್ರುಥ್ ಸೋಶಿಯಲ್ ಪೋಸ್ಟ್ ನಲ್ಲಿ ಟ್ರಂಪ್ ಬಹಿರಂಗಪಡಿಸಿದ್ದಾರೆ. "ದಾಸ್ತಾನು ಹಡಗುಗಳ ಮೂಲಕ ಇದನ್ನು ತರಲಾಗುತ್ತದೆ. ನೇರವಾಗಿ ಅಮೆರಿಕದ ಅನ್ಲೋಡಿಂಗ್ ಡಾಕ್ ಗಳಿಗೆ ತರಲಾಗುತ್ತದೆ" ಎಂದು ಸ್ಪಷ್ಟಪಡಿಸಿದ್ದಾರೆ.
ಅಧ್ಯಕ್ಷರಾಗಿ ಹಣವನ್ನು ತಾವೇ ನಿಯಂತ್ರಿಸಲಿದ್ದೇವೆ ಎಂದು ಹೇಳಿಕೊಂಡಿರುವ ಅವರು, ವೆನೆಝುವೆಲಾ ಮತ್ತು ಅಮೆರಿಕದ ಜನತೆಯ ಪ್ರಯೋಜನಕ್ಕಾಗಿ ಇದನ್ನು ಬಳಸಲಾಗುತ್ತದೆ ಎಂದು ಹೇಳಿದ್ದಾರೆ.
ವೆನೆಝುವೆಲಾಗೆ ಸಂಬಂಧಿಸಿದಂತೆ ಶ್ವೇತಭವನ ರವಿವಾರ ಓವಲ್ ಆಫೀಸ್ ನಲ್ಲಿ ತೈಲ ಕಂಪನಿ ಮುಖ್ಯಸ್ಥರ ಸಭೆ ಆಯೋಜಿಸಿದೆ. ಎಕ್ಸಾನ್, ಚೆರ್ವಾನ್ ಮತ್ತು ಕೊಂಕೊಫಿಲಿಪ್ಸ್ ಕಂಪನಿಗಳ ಮುಖ್ಯಸ್ಥರು ಇದರಲ್ಲಿ ಭಾಗವಹಿಸಲಿದ್ದಾರೆ ಎಂದು ಉನ್ನತ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.





