ಜಪಾನ್ನ ಈಶಾನ್ಯ ಕರಾವಳಿಯಲ್ಲಿ 6.1 ತೀವ್ರತೆಯ ಭೂಕಂಪ

ಸಾಂದರ್ಭಿಕ ಚಿತ್ರ| PTI
ಟೋಕಿಯೊ: ಜಪಾನ್ನ ಈಶಾನ್ಯ ಕರಾವಳಿಯಲ್ಲಿ 6.1 ತೀವ್ರತೆಯ ಭೂಕಂಪ ಸಂಭವಿಸಿದೆ. ಇವಟೆ ಸುತ್ತಮುತ್ತಲಿನ ಪ್ರದೇಶದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ವರದಿಯಾಗಿದೆ.
ಜಪಾನ್ ಹವಾಮಾನ ಸಂಸ್ಥೆ (JMA) ಪ್ರಕಾರ, ರವಿವಾರ ಸ್ಥಳೀಯ ಕಾಲಮಾನ 7.25ಕ್ಕೆ ಜಪಾನ್ನ ಈಶಾನ್ಯ ಕರಾವಳಿಯಲ್ಲಿ 6.1 ತೀವ್ರತೆಯ ಭೂಕಂಪ ಸಂಭವಿಸಿದೆ.
ಇವಟೆ ಮತ್ತು ಸುತ್ತಮುತ್ತಲಿನ ಪ್ರಾಂತ್ಯಗಳ ಹಲವು ಭಾಗಗಳಲ್ಲಿ ಭೂಕಂಪ ಸಂಭವಿಸಿದೆ. ಆದರೆ, ಈವರೆಗೆ ಯಾವುದೇ ಸುನಾಮಿ ಮುನ್ನೆಚ್ಚರಿಕೆಯನ್ನು ನೀಡಲಾಗಿಲ್ಲ. ಘಟನೆಯಲ್ಲಿ ಯಾವುದೇ ಹಾನಿ ಅಥವಾ ಸಾವುನೋವುಗಳ ಬಗ್ಗೆ ವರದಿಯಾಗಿಲ್ಲ.
ಕಳೆದ ಗುರುವಾರ ಇದೇ ವಲಯದಲ್ಲಿ 7.2 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿತ್ತು. ಜಪಾನ್ ಹವಾಮಾನ ಇಲಾಖೆಯು ಆರಂಭದಲ್ಲಿ ಈ ಭೂಕಂಪದ ತೀವ್ರತೆಯನ್ನು 7.0 ಎಂದು ಅಂದಾಜಿಸಿತ್ತಾದರೂ, ನಂತರ ಅದನ್ನು 7.2ಕ್ಕೆ ಪರಿಷ್ಕರಿಸಿತ್ತು.
Next Story




