ಕೊಲಂಬಿಯಾ ಸೇನಾ ವಿಮಾನ ಪತನ: 66 ಮಂದಿ ಮೃತ್ಯು

Screengrab: X/@DailyNewsJustIn
ಬೊಗೊಟಾ: 125 ಯೋಧರು ಹಾಗೂ ವಿಮಾನ ಸಿಬ್ಬಂದಿಗಳನ್ನು ಕೊಂಡೊಯ್ಯುತ್ತಿದ್ದ ಕೊಲಂಬಿಯಾ ಸೇನಾ ವಿಮಾನ ಟೇಕಾಫ್ ಆಗುತ್ತಿದ್ದಂತೆಯೇ ಪತನಗೊಂಡು, ಕನಿಷ್ಠ 66 ಮಂದಿ ಮೃತಪಟ್ಟು, ಹತ್ತಾರು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈಕ್ವೆಡಾರ್ ಮತ್ತು ಪೆರು ಬಳಿ ದಕ್ಷಿಣ ಗಡಿ ಹಂಚಿಕೊಂಡಿರುವ ಪುಯೆರ್ಟೊ ಲೆಗ್ವಿಝಾಮೊನಿಂದ ನಿರ್ಗಮಿಸುತ್ತಿದ್ದಂತೆಯೇ ಸಿ-130 ಹರ್ಕ್ಯುಲಸ್ ವಿಮಾನ ಪತನಗೊಂಡಿದ್ದು, ಅರಣ್ಯದ ತಳದಲ್ಲಿ ಉರಿಯುತ್ತಿರುವ ವಿಮಾನದ ಅವಶೇಷಗಳು ಕಂಡು ಬಂದಿವೆ.
ಈ ಘಟನೆಯಲ್ಲಿ ಆರು ಮಂದಿ ವಾಯು ಪಡೆ ಸಿಬ್ಬಂದಿಗಳು ಹಾಗೂ ಇಬ್ಬರು ಪೊಲೀಸ್ ಅಧಿಕಾರಿಗಳೊಂದಿಗೆ 58 ಯೋಧರು ಮೃತಪಟ್ಟಿದ್ದಾರೆ ಎಂದು ಸೇನಾ ಮೂಲವೊಂದು ತಿಳಿಸಿದೆ ಎಂದು AFP ಸುದ್ದಿ ಸಂಸ್ಥೆ ವರದಿ ಮಾಡಿದೆ.
ಪತನದ ಕಾರಣವನ್ನು ತನಿಖಾಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.
ಈ ಘಟನೆಯ ವಿಡಿಯೊ ದೃಶ್ಯಾವಳಿಯನ್ನು ಕೊಲಂಬಿಯಾ ಅಧ್ಯಕ್ಷ ಗುಸ್ತವೊ ಪೆಟ್ರೊ ಹಂಚಿಕೊಂಡಿದ್ದು, ವಿಮಾನವು ಪತನಗೊಳ್ಳುವುದಕ್ಕೂ ಮುನ್ನ, ಮೇಲೇರಲು ಯತ್ನಿಸುತ್ತಿರುವುದು ಈ ವಿಡಿಯೊದಲ್ಲಿ ಸೆರೆಯಾಗಿದೆ.
Hasta el momento hubo 77 heridos en el hospital, un muerto, 43 personas por establecer su estado.
— Gustavo Petro (@petrogustavo) March 23, 2026
Aún no se conoce las causas del accidente del avión Hércules.
Fuerza a las familias de los soldados jóvenes de la Patria. pic.twitter.com/Eanr2NrfkK
¿Que está pasando con un congreso y una corte que no fueron capaces de financiar al estado? por no cobrarle impuestos a los ricos y por dañar el gobierno progresista con el que no convenían y que explícitamente les pidió los recursos para mantener la defensa del país? Ningún país… https://t.co/UwHh1qDUY8
— Gustavo Petro (@petrogustavo) March 24, 2026






