ರಷ್ಯಾದಲ್ಲಿ ಮತ್ತೆ 7.0 ತೀವ್ರತೆಯ ಪ್ರಬಲ ಭೂಕಂಪ

ಸಾಂದರ್ಭಿಕ ಚಿತ್ರ (PTI)
ಮಾಸ್ಕೊ: ರಷ್ಯಾದ ಪೂರ್ವ ಭಾಗದ ಕುರಿಲ್ ದ್ವೀಪಗಳಲ್ಲಿ 7.0 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಇದರ ಬೆನ್ನಲ್ಲೇ ರಷ್ಯಾದ ತುರ್ತು ಸೇವೆಗಳ ಸಚಿವಾಲಯ ಕಮ್ಚಟ್ಕಾದ ಮೂರು ಪ್ರದೇಶಗಳಲ್ಲಿ ಸುನಾಮಿ ಕುರಿತು ಎಚ್ಚರಿಕೆಯನ್ನು ನೀಡಿದೆ.
ಭೂಕಂಪದ ಬಳಿಕ ಸಣ್ಣ ಪ್ರಮಾಣದಲ್ಲಿ ಸುನಾಮಿ ಅಲೆಗಳು ಕಾಣಿಸಿಕೊಂಡಿದೆ ಎಂದು ದೇಶದ ತುರ್ತು ಸೇವೆಗಳ ಸಚಿವಾಲಯ ತಿಳಿಸಿದೆ.
ಅಮೆರಿಕದ ಭೂಸರ್ವೇಕ್ಷಣಾ ಇಲಾಖೆಯ ಪ್ರಕಾರ 7.0 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪದಿಂದಾಗಿ ಈ ಪ್ರದೇಶದಲ್ಲಿ 600 ವರ್ಷಗಳಲ್ಲಿ ಮೊದಲ ಬಾರಿ ಜ್ವಾಲಾಮುಖಿ ಸ್ಫೋಟಗೊಂಡಿದೆ ಎಂದು ರಷ್ಯಾದ ಆರ್ಐಎ ಸ್ಟೇಟ್ ನ್ಯೂಸ್ ವರದಿ ಮಾಡಿದೆ.
ರಷ್ಯಾದ ಕಮ್ಚಟ್ಸ್ಕಾ ಪ್ರದೇಶದಲ್ಲಿ ಬುಧವಾರ ಬೆಳಗಿನ ಜಾವ 8.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿತ್ತು. ಪೂರ್ವ ರಷ್ಯಾದಲ್ಲಿ ತೀವ್ರ ಕಂಪನಕ್ಕೆ ಕಾರಣವಾದ ಈ ಭೂಕಂಪ ನೆರೆಯ ರಾಷ್ಟ್ರಗಳಾದ ಜಪಾನ್, ಅಮೆರಿಕ ಮತ್ತು ಪೆಸಿಫಿಕ್ ದ್ವೀಪಗಳ ಮೇಲೆ ಪ್ರಭಾವ ಬೀರಿತ್ತು.
Next Story





