ನ್ಯೂಯಾರ್ಕ್: 9/11ರ ಉಗ್ರ ದಾಳಿಯ ಸಂತ್ರಸ್ತರಿಗೆ ಗೌರವ ಸಲ್ಲಿಕೆ

Photo Credit : PTI
ನ್ಯೂಯಾರ್ಕ್, ಸೆ.11: ಸೆಪ್ಟೆಂಬರ್ 11ರ ದಾಳಿಯ 25ನೇ ವಾರ್ಷಿಕ ದಿನದ ಮುನ್ನಾದಿನದಂದು, ಪ್ರಕಾಶಮಾನವಾದ 2,977 ಡ್ರೋನ್ಗಳು ಆಕಾಶಕ್ಕೆ ಜಿಗಿದು ಆ ದಿನ ಪ್ರಾಣ ಕಳೆದುಕೊಂಡ ಜೀವಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುವುದರೊಂದಿಗೆ ನ್ಯೂಯಾರ್ಕ್ ಬಂದರು ದೀಪಗಳ ಸಾಗರವಾಗಿ ಮಾರ್ಪಟ್ಟಿತು.
2,977 ಎಂಬ ಸಂಖ್ಯೆಯು ವಿಶೇಷ ಮಹತ್ವವನ್ನು ಹೊಂದಿದೆ. ಇದು 9/11ರ ದಾಳಿಯಲ್ಲಿ ಕೊಲ್ಲಲ್ಪಟ್ಟ ಜನರನ್ನು ಪ್ರತಿನಿಧಿಸುತ್ತದೆ. ಅಮೆರಿಕದ ಸಾರಿಗೆ ಕಾರ್ಯದರ್ಶಿ ಶಾನ್ ಡಫ್ಫಿ ಅವರು ಈ ಪ್ರದರ್ಶನದ ದೃಶ್ಯಾವಳಿಗಳನ್ನು ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದಾರೆ. ಈ ಪ್ರದರ್ಶನವನ್ನು ಸಂತ್ರಸ್ತರು, ಬದುಕುಳಿದವರು, ಮೊದಲು ಪ್ರತಿಕ್ರಿಯಿಸಿದ ರಕ್ಷಣಾ ಸಿಬ್ಬಂದಿ ಮತ್ತು 9/11ರ ಘಟನೆಯಿಂದ ಯಾರ ಜೀವನ ಶಾಶ್ವತವಾಗಿ ಬದಲಾಯಿತೋ ಅವರಿಗೆ ಗೌರವ ಸಲ್ಲಿಸಲು ಪ್ರಸ್ತುತಪಡಿಸಲಾಯಿತು.
2001ರ ಸೆಪ್ಟೆಂಬರ್ 11ರಂದು ನ್ಯೂಯಾರ್ಕ್ನ ವರ್ಲ್ಡ್ ಟ್ರೇಡ್ ಸೆಂಟರ್ ನ ಅವಳಿ ಗೋಪುರಗಳಿಗೆ ಮತ್ತು ಪೆಂಟಗಾನ್ಗೆ ‘ಅಲ್ಖೈದಾ’ ಉಗ್ರರು ವಿಮಾನದ ಮೂಲಕ ದಾಳಿ ನಡೆಸಿದ್ದರು.




