ನರಮೇಧ ಮರೆಮಾಚಲು ಹೆಣೆದ ಆಧಾರರಹಿತ ಸುಳ್ಳು: ನೆತನ್ಯಾಹು ಭಾಷಣಕ್ಕೆ ಮಮ್ದಾನಿ ಪ್ರತಿಕ್ರಿಯೆ

ಝೊಹ್ರಾನ್ ಮಮ್ದಾನಿ , ಬೆಂಜಮಿನ್ ನೆತನ್ಯಾಹು | Photo Credit : PTI
ನ್ಯೂಯಾರ್ಕ್, ಸೆ.25: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ವಿಶ್ವಸಂಸ್ಥೆಯ 81ನೇ ಮಹಾಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಫೆಲೆಸ್ತೀನೀಯರ ಮೇಲಿನ ತಮ್ಮ ನರಮೇಧವನ್ನು ಮರೆಮಾಚಲು ಆಧಾರರಹಿತ ಸುಳ್ಳುಗಳನ್ನು ಪುನರಾವರ್ತಿಸಿದ್ದಾರೆ. ಆದರೆ, ಅವರು ಯುದ್ಧ ಅಪರಾಧಗಳು ಮತ್ತು ಮಾನವೀಯತೆಯ ವಿರುದ್ಧದ ಅಪರಾಧಗಳ ಆರೋಪದ ಮೇಲೆ ಅಂತರ್ರಾಷ್ಟ್ರೀಯ ಅಪರಾಧ ನ್ಯಾಯಾಲಯದ (ಎಸಿಸಿ) ಬಂಧನ ವಾರಂಟ್ ಹೊಂದಿರುವ ವ್ಯಕ್ತಿ ಎಂಬುದನ್ನು ಯಾವುದೇ ಸುಳ್ಳು ಬದಲಾಯಿಸಲು ಸಾಧ್ಯವಿಲ್ಲ ಎಂದು ನ್ಯೂಯಾರ್ಕ್ ಸಿಟಿ ಮೇಯರ್ ಝೊಹ್ರಾನ್ ಮಮ್ದಾನಿ ಪ್ರತಿಪಾದಿಸಿದ್ದಾರೆ.
ತಮ್ಮ ಭಾಷಣದಲ್ಲಿ ನೆತನ್ಯಾಹು ಅವರು ನ್ಯೂಯಾರ್ಕ್ ಮೇಯರ್ ವಿರುದ್ಧ ನೇರ ದಾಳಿ ನಡೆಸಿ, ನ್ಯೂಯಾರ್ಕ್ ನಲ್ಲಿರುವ ಯಹೂದಿ ನಿವಾಸಿಗಳು ಸುರಕ್ಷಿತವಾಗಿರದ ವಾತಾವರಣವನ್ನು ನಿರ್ಮಿಸಲು ಮಮ್ದಾನಿ ಕಾರಣ ಎಂದು ಆರೋಪಿಸಿದ್ದರು.
Next Story




