ಡೀಸೆಲ್ ಸಾಗಾಟದ ಟ್ರಕ್ಗೆ ಢಿಕ್ಕಿಯಾಗಿ ಸ್ಫೋಟಗೊಂಡ ಬಸ್; 16 ಮಂದಿ ಮೃತ್ಯು

Photo: NDTV
ಲಾಹೋರ್: ಪಾಕಿಸ್ತಾನದ ಪಂಜಾಬ್ ಪ್ರಾಂತದಲ್ಲಿ ರವಿವಾರ ನಡೆದ ಅಪಘಾತದಲ್ಲಿ 16 ಮಂದಿ ಮೃತಪಟ್ಟು ಇತರ 15 ಮಂದಿ ಗಾಯಗೊಂಡಿರುವುದಾಗಿ `ಜಿಯೊ ನ್ಯೂಸ್' ವರದಿ ಮಾಡಿದೆ.
ಡೀಸೆಲ್ ಸಾಗಾಟದ ಟ್ರಕ್ಗೆ ಪ್ರಯಾಣಿಕರಿದ್ದ ಬಸ್ಸೊಂದು ಢಿಕ್ಕಿಯಾಗಿ ಬಸ್ಸಿಗೆ ಬೆಂಕಿ ಹತ್ತಿಕೊಂಡು ಸ್ಫೋಟಗೊಂಡಿದೆ ಎಂದು ವರದಿ ಹೇಳಿದೆ. ಮೃತರಲ್ಲಿ ಮಹಿಳೆಯರು ಹಾಗೂ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಮೃತದೇಹಗಳು ಸುಟ್ಟು ಕರಕಲಾಗಿರುವುದರಿಂದ ಡಿಎನ್ಎ ಪರೀಕ್ಷೆಯ ಮೂಲಕ ಮೃತರ ಗುರುತು ಪತ್ತೆಹಚ್ಚಲಾಗುವುದು. ಗಾಯಾಳುಗಳಲ್ಲಿ 4 ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ಜಿಲ್ಲಾ ಪೊಲೀಸ್ ಅಧಿಕಾರಿ ಪಹಾದ್ ಹೇಳಿದ್ದಾರೆ. ಕರಾಚಿಯಿಂದ ಇಸ್ಲಮಾಬಾದ್ಗೆ ಪ್ರಯಾಣಿಸುತ್ತಿದ್ದ ಬಸ್ಸಿನಲ್ಲಿ ಸುಮಾರು 40 ಪ್ರಯಾಣಿಕರಿದ್ದರು. ಪಿಂಡಿ ಭಟ್ಟಿಯಾನ್ ಬಳಿಯ ಫೈಸಲಾಬಾದ್ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ ಎಂದು ಮಾಧ್ಯಮ ವರದಿ ತಿಳಿಸಿದೆ.
Next Story