ಅಬುಧಾಬಿ| ಭದ್ರತಾ ಪಡೆಗಳು ಹೊಡೆದುರುಳಿಸಿದ ಕ್ಷಿಪಣಿಯ ಅವಶೇಷ ಬಿದ್ದು ಭಾರತೀಯ ಪ್ರಜೆ ಸಹಿತ ಇಬ್ಬರು ಮೃತ್ಯು

ಅಬುಧಾಬಿ, ಮಾ.26: ಗುರುವಾರ ಯುಎಇ ವಾಯುರಕ್ಷಣಾ ವ್ಯವಸ್ಥೆ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಪ್ರತಿಬಂಧಿಸಿದ ಬಳಿಕ ಕ್ಷಿಪಣಿಯ ಅವಶೇಷವು ರಸ್ತೆಯ ಮೇಲೆ ಬಿದ್ದು ಓರ್ವ ಭಾರತೀಯ ಮತ್ತು ಒಬ್ಬ ಪಾಕಿಸ್ತಾನ ಪ್ರಜೆಗಳು ಮೃತಪಟ್ಟಿದ್ದು ಇತರ ಹಲವರು ಗಾಯಗೊಂಡಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ನಮ್ಮ ವಾಯುರಕ್ಷಣಾ ವ್ಯವಸ್ಥೆಯು ಬ್ಯಾಲಿಸ್ಟಿಕ್ ಕ್ಷಿಪಣಿಯೊಂದನ್ನು ಯಶಸ್ವಿಯಾಗಿ ಪ್ರತಿಬಂಧಿಸಿದೆ. ಆದರೆ ಕ್ಷಿಪಣಿಯ ಅವಷೇಶಗಳು ರಸ್ತೆಯ ಮೇಲೆ ಬಿದ್ದು ಪಾಕಿಸ್ತಾನ ಮತ್ತು ಭಾರತದ ಪ್ರಜೆಗಳು ಮೃತಪಟ್ಟಿದ್ದಾರೆ' ಎಂದು ಅಬುಧಾಬಿಯ ಮಾಧ್ಯಮ ಕಚೇರಿ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದೆ.
ಈ ಮಧ್ಯೆ, ಇಂಧನ ಸ್ಥಳಗಳು ಹಾಗೂ ನಾಗರಿಕ ಪ್ರದೇಶಗಳ ಮೇಲೆ ಇರಾನ್ ಮುಂದುವರಿಸಿರುವ ದಾಳಿಗಳ ಬಗ್ಗೆ ಹಲವು ಗಲ್ಫ್ ರಾಷ್ಟ್ರಗಳು ವಿಶ್ವಸಂಸ್ಥೆಯಲ್ಲಿ ಕಳವಳ ವ್ಯಕ್ತಪಡಿಸಿವೆ. ಇಂತಹ ಕ್ರಮಗಳು ಸಾರ್ವಭೌಮತ್ವ ಮತ್ತು ಅಂತಾರಾಷ್ಟ್ರೀಯ ಕಾನೂನನ್ನು ದುರ್ಬಲಗೊಳಿಸುತ್ತವೆ ಎಂದು ಕುವೈತ್‌ನ ರಾಯಭಾರಿ ಹೇಳಿದ್ದಾರೆ.
Next Story




