ಲಾಹೋರ್ನಲ್ಲಿ ಅಪಘಾತ: ಜೆಇಎಂ ಕಮಾಂಡರ್ ಅಸಿಮ್, ಪತ್ನಿ, ಪುತ್ರ ಮೃತ್ಯು

Photo Credit: X
ಲಾಹೋರ್ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ನ (ಜೆಇಎಂ) ಕಾರ್ಯಾಚರಣಾ ಕಮಾಂಡರ್ ಮುಹಮ್ಮದ್ ಅಸಿಮ್, ಪತ್ನಿ ಹುಮಾ ಅಸಿಮ್ ಮತ್ತು ಪುತ್ರ ತಲ್ಹಾ ಅಸಿಮ್ ಲಾಹೋರ್ನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಲಾಹೋರ್ನ ಗರ್ಹಿ ಶಾಹು ಪ್ರದೇಶದ ಅಲ್ಲಾಮಾ ಇಕ್ಬಾಲ್ ರಸ್ತೆಯಲ್ಲಿ ಟ್ರೇಲರ್ ವ್ಯಾನ್ ಕಾರಿಗೆ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ. ಢಿಕ್ಕಿಯ ತೀವ್ರತೆಗೆ ಕಾರು ಟ್ರೇಲರ್ ಅಡಿಯಲ್ಲಿ ಸಿಲುಕಿಕೊಂಡಿತ್ತು. ಮೃತದೇಹಗಳನ್ನು ಹೊರತೆಗೆಯಲು ರಕ್ಷಣಾ ಸಿಬ್ಬಂದಿ ಕಾರಿನ ಅವಶೇಷಗಳನ್ನು ಕತ್ತರಿಸಬೇಕಾಯಿತು ಎಂದು ವರದಿಯಾಗಿದೆ.
Next Story




