Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಟ್ರಂಪ್ ಬೆಂಬಲಿಗ Fox News ಸಮೀಕ್ಷೆಯ...

ಟ್ರಂಪ್ ಬೆಂಬಲಿಗ Fox News ಸಮೀಕ್ಷೆಯ ಪ್ರಕಾರವೇ ಈಗ ಅಮೆರಿಕನ್ನರಿಂದ ಟ್ರಂಪ್ ಆಡಳಿತದ ಬಗ್ಗೆ ಅಸಮಾಧಾನ!

ವಾರ್ತಾಭಾರತಿವಾರ್ತಾಭಾರತಿ21 Nov 2025 11:47 PM IST
share
ಟ್ರಂಪ್ ಬೆಂಬಲಿಗ Fox News ಸಮೀಕ್ಷೆಯ ಪ್ರಕಾರವೇ ಈಗ ಅಮೆರಿಕನ್ನರಿಂದ ಟ್ರಂಪ್ ಆಡಳಿತದ ಬಗ್ಗೆ ಅಸಮಾಧಾನ!
ಅಮೆರಿಕದ ಆರ್ಥಿಕತೆಗೆ ಟ್ರಂಪ್ ಹೆಚ್ಚು ಹಾನಿ ಮಾಡುತ್ತಿದ್ದಾರೆ ಎಂದ ಅಮೆರಿಕನ್ನರು

ವಾಷಿಂಗ್ಟನ್: ಆರ್ಥಿಕತೆಯ ಬಗೆಗಿನ ಅಸಮಾಧಾನ, ಬೆಲೆಯೇರಿಕೆಯ ಸಂಕಷ್ಟ ಹಾಗೂ ಟ್ರಂಪ್ ಸರಕಾರದ ಆಡಳಿತಾತ್ಮಕ ನೀತಿಗಳ ಬಗೆಗಿನ ಅನಿಶ್ಚಿತತೆಯಿಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರ ನಿಷ್ಠ ಕ್ಷೇತ್ರಗಳಲ್ಲೇ ಅವರ ಭಾರಿ ಪ್ರಮಾಣದ ಅಸಮಾಧಾನ ವ್ಯಕ್ತವಾಗಿದೆ ಎಂದು ಇತ್ತೀಚೆಗೆ ಡೊನಾಲ್ಡ್ ಟ್ರಂಪ್ ರನ್ನು ಬೆಂಬಲಿಸುವ Fox News ಸುದ್ದಿ ಸಂಸ್ಥೆಯ ಸಮೀಕ್ಷೆಯಲ್ಲೇ ವ್ಯಕ್ತವಾಗಿದೆ.

ಈ ಸಮೀಕ್ಷೆಯಲ್ಲಿ ಭಾಗವಹಿಸಿರುವ ಶೇ. 76ರಷ್ಟು ಮತದಾರರು ದೇಶದ ಆರ್ಥಿಕತೆಯ ಬಗ್ಗೆ ನಕಾರಾತ್ಮಕ ಅಭಿಪ್ರಾಯ ಹೊಂದಿದ್ದಾರೆ. ಇದು ಜುಲೈ ತಿಂಗಳಲ್ಲಿದ್ದ ಶೇ. 67ಕ್ಕಿಂತ ಹೆಚ್ಚು ಕಳಪೆಯಾಗಿದ್ದು, ಅಮೆರಿಕದ ಮಾಜಿ ಅಧ್ಯಕ್ಷ ಜೋ ಬೈಡನ್ ರ ಅಧಿಕಾರಾವಧಿಯ ಅಂತ್ಯದಲ್ಲಿದ್ದ ಶೇ. 70ಕ್ಕಿಂತಲೂ ಅಧಿಕವಾಗಿದೆ.

ಒಟ್ಟಾರೆಯಾಗಿ ದೊಡ್ಡ ಪ್ರಮಾಣದ ರಿಪಬ್ಲಿಕನ್ ಬೆಂಬಲಿಗರ ಪ್ರಕಾರ, ಅವರ ದಿನಸಿ, ಸಾರ್ವಜನಿಕ ಸೇವೆಗಳು, ಆರೋಗ್ಯ ಆರೈಕೆ ಹಾಗೂ ವಸತಿ ವೆಚ್ಚಗಳು ಈ ವರ್ಷ ಮತ್ತಷ್ಟು ಹೆಚ್ಚಳವಾಗಿವೆ. ಇದಕ್ಕೆಲ್ಲ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರನ್ನು ದೂಷಿಸುತ್ತಾರೆ.

ಮಾಜಿ ಅಧ್ಯಕ್ಷ ಜೋ ಬೈಡನ್ ಗೆ ಹೋಲಿಸಿದರೆ ಎರಡು ಪಟ್ಟು ಹೆಚ್ಚು ಡೊನಾಲ್ಡ್ ಟ್ರಂಪ್ ರನ್ನು ದೂಷಿಸುವ ಅವರು, ಇಂದಿನ ಆರ್ಥಿಕತೆಗೆ ಅವರೇ ಕಾರಣ ಎಂದೂ ದೂರುತ್ತಾರೆ. ಟ್ರಂಪ್ ರ ಆರ್ಥಿಕ ನೀತಿಗಳಿಂದ ನಮಗೆ ತೊಂದರೆಯಾಗಿದೆ ಎಂದು ಮೂರು ಪಟ್ಟು ಜನ ಹೇಳುತ್ತಾರೆ (ಇದೇ ಮಾತನ್ನು ಕಳೆದ ವರ್ಷ ಜೋ ಬೈಡನ್ ಕುರಿತು ಅವರು ಹೇಳಿದ್ದರು). ಇದರೊಂದಿಗೆ ಟ್ರಂಪ್ ಆರ್ಥಿಕತೆಯನ್ನು ನಿರ್ವಹಿಸುತ್ತಿರುವ ರೀತಿಯ ಬಗೆಗಿನ ಅಭಿಪ್ರಾಯ ಮತ್ತಷ್ಟು ಕುಸಿತ ಕಂಡಿದ್ದು, ಅವರ ಒಟ್ಟಾರೆ ಕಾರ್ಯನಿರ್ವಹಣೆ ಬಗೆಗಿನ ಅವರ ಕಟ್ಟಾ ಬೆಂಬಲಿಗರ ಸಮ್ಮತಿ ದಾಖಲೆಯ ಮಟ್ಟಕ್ಕೆ ಕುಸಿದಿದೆ.

ಸರಕಾರ ಸ್ಥಗಿತಗೊಂಡ ನಂತರ, ರಿಪಬ್ಲಿಕನ್ ಪಾರ್ಟಿ ಹಾಗೂ ಡೆಮಾಕ್ರಟಿಕ್ ಪಾರ್ಟಿ ಬಗೆಗಿನ ಜನರ ಅಭಿಪ್ರಾಯ ಸೂಚ್ಯಂಕದಲ್ಲಿ ಮತ್ತಷ್ಟು ಕುಸಿತವಾಗಿದೆ. ಸರಿಸುಮಾರು 10ರಲ್ಲಿ 6 ಮಂದಿ ಎರಡೂ ಪಕ್ಷಗಳ ಸಂಸದರು ನಮ್ಮನ್ನು ಮನುಷ್ಯರಂತೆ ಭಾವಿಸುತ್ತಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗಡಿ ಭದ್ರತೆ, ವಲಸೆ ಹಾಗೂ ಅಪರಾಧದ ಕುರಿತು ರಿಪಬ್ಲಿಕನ್ನರಿಗೆ ಉತ್ತಮ ಯೋಜನೆಗಳಿವೆ ಎಂದು ಮತದಾರರು ಅಭಿಪ್ರಾಯಪಟ್ಟಿದ್ದರೆ, ಕೈಗೆಟುವಿಕೆ, ವೇತನಗಳು, ಆರೋಗ್ಯ ಸೇವೆಗಳು ಹಾಗೂ ಹವಾಮಾನಕ್ಕೆ ಸಂಬಂಧಿಸಿದಂತೆ ಡೆಮಾಕ್ರಟಿಕ್ ಗಳು ಉತ್ತಮ ಚಿಂತನೆಗಳನ್ನು ಹೊಂದಿದ್ದಾರೆ ಎಂದು ಅವರೆಲ್ಲ ಹೇಳಿದ್ದಾರೆ.

ವಿಶ್ವವನ್ನು ಸುರಕ್ಷಿತವಾಗಿಸಲು ಹಾಗೂ ಮಾದಕ ಕಳ್ಳಸಾಗಣೆದಾರರನ್ನು ನಿಯಂತ್ರಿಸುವುದಕ್ಕೆ ಸಂಬಂಧಿಸಿದಂತೆ ಸರಕಾರದ ವ್ಯೂಹತಂತ್ರದ ಕುರಿತು ಮಿಶ್ರ ಅಭಿಪ್ರಾಯಗಳು ವ್ಯಕ್ತವಾಗಿವೆ. ಟ್ರಂಪ್ ರ ಆಡಳಿತದ ಬಗ್ಗೆ ಶ್ವೇತವರ್ಣದ ಮತದಾರರು ಹಾಗೂ ಕಾಲೇಜು ಪದವಿಯಿಲ್ಲದ ಮತದಾರರ ನಡುವೆ ದೊಡ್ಡ ಪ್ರಮಾಣದ ಅಸಮ್ಮತಿ ವ್ಯಕ್ತವಾಗಿದೆ.

ಕಳೆದ ಮಾರ್ಚ್ ತಿಂಗಳಿಗೆ ಹೋಲಿಸಿದರೆ, ಶೇ. 92ರಷ್ಟಿದ್ದ ಸಮ್ಮತಿಯ ಪ್ರಮಾಣ, ಇದೀಗ ಶೇ. 86ಕ್ಕೆ ಇಳಿಕೆಯಾಗಿದೆ.

ಎಲ್ಲ ಮತದಾರರ ಪೈಕಿ, ಶೇ. 41ರಷ್ಟು ಮತದಾರರು ಟ್ರಂಪ್ ಕೆಲಸ ಮಾಡುತ್ತಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರೆ, ಶೇ. 58ರಷ್ಟು ಮಂದಿ ಅಸಮ್ಮತಿ ವ್ಯಕ್ತಪಡಿಸಿದ್ದಾರೆ. ಕೇವಲ ಒಂದು ಬಾರಿ ಮಾತ್ರ ಅವರ ಸೂಚ್ಯಂಕ ಈ ರೀತಿ ಇಳಿಕೆಯಾಗಿತ್ತು. ಟ್ರಂಪ್ ರ ಪ್ರಥಮ ಅವಧಿಯಲ್ಲಿ ಅಕ್ಟೋಬರ್ 2017ರಲ್ಲಿ ಅವರ ಬಗೆಗಿನ ಸಮ್ಮತಿ ಪ್ರಮಾಣ ಶೇ. 38-57ಕ್ಕೆ ಇಳಿಕೆಯಾಗಿತ್ತು. ಎರಡು ತಿಂಗಳ ಹಿಂದೆ ಅದು ಶೇ. 46-54ಕ್ಕೆ ಕುಸಿದಿತ್ತು.

ಆದರೆ, ಜೋ ಬೈಡನ್ ರನ್ನು ಟ್ರಂಪ್ ರೊಂದಿಗೆ ಹೋಲಿಸಿದಾಗ, ಬೈಡನ್ ರ ಅಧ್ಯಕ್ಷೀಯ ಸೂಚ್ಯಂಕ ಕೊಂಚ ಉತ್ತಮವಾಗಿದೆ. ನವೆಂಬರ್ 2021ರಲ್ಲಿ ಶೇ. 44 ಮಂದಿ ಅವರ ಕಾರ್ಯವೈಖರಿಯನ್ನು ಅನುಮೋದಿಸಿದ್ದರೆ, ಶೇ. 54 ಮಂದಿ ಅಸಮ್ಮತಿ ವ್ಯಕ್ತಪಡಿಸಿದ್ದರು.

ತಮ್ಮ ವೈಯಕ್ತಿಕ ಹಣಕಾಸು ಸ್ಥಿತಿಯು ಅತ್ಯುತ್ತಮ/ಉತ್ತಮವಾಗಿದೆ ಎಂದು ಶೇ. 40ರಷ್ಟು ಮತದಾರರು ಅಭಿಪ್ರಾಯಪಟ್ಟಿದ್ದರೆ, ಶೇ. 60ರಷ್ಟು ಮತದಾರರು ಪರವಾಗಿಲ್ಲ/ಕೆಟ್ಟದಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ತಮ್ಮ ಹಣಕಾಸು ಪರಿಸ್ಥಿತಿ ಕಳೆದ ವರ್ಷದಂತೆಯೇ ಇದೆ ಎಂಬುದು ಈ ಮತದಾರರ ಅಭಿಪ್ರಾಯವಾಗಿದೆ. ಕಾಲೇಜಿಗೆ ಹೋಗದವರು, ಹಿಸ್ಪಾನಿಕ್ ಗಳು, ಕಪ್ಪು ವರ್ಣೀಯರು, ಸ್ವತಂತ್ರರು ಹಾಗೂ 45 ವರ್ಷಕ್ಕಿಂತ ಕೆಳಗಿನವರ ನಡುವೆ ಡೊನಾಲ್ಡ್ ಟ್ರಂಪ್ ಆಡಳಿತದ ಬಗ್ಗೆ ಗಮನಾರ್ಹ (ಸುಮಾರು ಶೇ. 70) ಪ್ರಮಾಣದ ನಕಾರಾತ್ಮಕ ಅಭಿಪ್ರಾಯವಿದೆ. ಗೃಹ ಆದಾಯ 50,000 ಡಾಲರ್ ಗಿಂತ ಕಡಿಮೆಯಿರುವವರ ಪೈಕಿ, ಶೇ. 79 ಮಂದಿ ಸಂಪೂರ್ಣವಾಗಿ ತಮ್ಮ ಆರ್ಥಿಕ ಸೂಚ್ಯಂಕ ಕೆಟ್ಟದಾಗಿದೆ ಎಂದು ಹೇಳಿದ್ದಾರೆ.


FOX NEWS VOTER POLL: NEW JERSEY GOVERNORSHIP REMAINS DEMOCRATIC WITH SHERRILL WIN




FOX NEWS VOTER POLL: CALIFORNIA VOTERS OK CONGRESSIONAL REDISTRICTING PLAN







share
ವಾರ್ತಾಭಾರತಿ
ವಾರ್ತಾಭಾರತಿ
Next Story
X