ವಿಶ್ವ ಆಹಾರ ಕಾರ್ಯಕ್ರಮದ ಸದ್ಭಾವನಾ ರಾಯಭಾರಿ ಸ್ಥಾನಕ್ಕೆ ನಟಿ ಹೆಂಡ್ ಸಬ್ರಿ ರಾಜೀನಾಮೆ

Photo: X/CelebsArabic
ಕೈರೋ: ಟ್ಯುನಿಶಿಯಾದ ಚಿತ್ರ ನಟಿ ಹೆಂಡ್ ಸಬ್ರಿ ಅವರು ವಿಶ್ವ ಆಹಾರ ಕಾರ್ಯಕ್ರಮದ ಸದ್ಭಾವನಾ ರಾಯಭಾರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಗಾಝಾದಲ್ಲಿ ಹಸಿವನ್ನು ಯುದ್ಧದ ಅಸ್ತ್ರವಾಗಿ ಬಳಸಲಾಗುತ್ತಿರುವುದನ್ನು ವಿರೋಧಿಸಿ ತಾನು ಪದತ್ಯಾಗ ಮಾಡಿರುವುದಾಗಿ ಅವರು ಹೇಳಿದ್ದಾರೆ.
‘‘ವಿಶ್ವಸಂಸ್ಥೆಯ ಏಜೆನ್ಸಿಯಾದ ವಿಶ್ವ ಆರೋಗ್ಯ ಕಾರ್ಯಕ್ರಮದ ಜೊತೆಗಿನ 13 ವರ್ಷಗಳ ಒಡನಾಟದ ಬಳಿಕ ನಾನು ಭಾರವಾದ ಹೃದಯ ಹಾಗೂ ಗಾಢ ವಿಷಾದದೊಂದಿಗೆ ಪದತ್ಯಾಗ ಮಾಡುತ್ತಿರುವುದಾಗಿ ಅರಬ್ ಸಿನೆಮಾ ಜಗತ್ತಿನ ಜನಪ್ರಿಯ ತಾರೆಯಾಗಿರುವ ಸಬ್ರಿ ಹೇಳಿದ್ದಾರೆ.
ಸಬ್ರಿ ಅವರ ಹೇಳಿಕೆಯು ಬುಧವಾರ ತಡರಾತ್ರಿ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರಕಟವಾಗಿತ್ತು. ದಿಗ್ಭಂಧನಕ್ಕೊಳಗಾಗಿರುವ ಫೆಲೆಸ್ತೀನ್ ಪ್ರಾಂತದಲ್ಲಿ ಮಾನವೀಯ ನೆಲೆಯಲ್ಲಿ ತಕ್ಷಣವೇ ಕದನವಿರಾಮ ಘೋಷಣೆಯಾಗುವಂತೆ ಮಾಡಲು ಮುತುವರ್ಜಿ ವಹಿಸಬೇಕೆಂದು ತಾನು ಜಾಗತಿಕ ಆರೋಗ್ಯ ಕಾರ್ಯಕ್ರಮ (WAFP) ಅನ್ನು ಕೋರಿರುವುದಾಗಿಯಾ ಸಬ್ರಿ ತಿಳಿಸಿದ್ದಾರೆ.
ಈ ಹಿಂದಿನ ಬಿಕ್ಕಟ್ಟಿನ ಸನ್ನಿವೇಶಗಳಲ್ಲಿಯೂ ಮಾಡಲಾದಂತೆ ಈಗ ಕೂಡಾ WAFPಯು ಬಲವಾದ ಧ್ವನಿಯೆತ್ತಬೇಕೆಂದು ತಾನು ಆಶಿಸುವುದಾಗಿ ಅವರು ಹೇಳಿದ್ದಾರೆ. ಸಬ್ರಿಯವರ ನೂತನ ಚಿತ್ರ ಫೋರ್ಡಾಟರ್ಸ್ಗೆ ಇತ್ತೀಚೆಗೆ ನಡೆದ ಕಾನ್ ಚಲನಚಿತ್ರೋತ್ಸವದಲ್ಲಿ ಶ್ರೇಷ್ಠ ಸಾಕ್ಷ್ಯಚಿತ್ರ ಪ್ರಶಸ್ತಿ ದೊರೆತಿತ್ತು.
ರಾಜೀನಾಮೆಗೆ ಪ್ರತಿಕ್ರಿಯಿಸಿರುವ WAFPಯು ತನ್ನ ಸದ್ಭಾವನಾ ರಾಯಭಾರಿಯಾಗಿ ಸಬ್ರಿಯವರು ನೀಡಿದ ಅಚಲ ಬೆಂಬಲ ಹಾಗೂ ಶ್ರದ್ಧೆಗೆ ತಾನು ಕೃತಜ್ಞನಾಗಿರುವುದಾಗಿ ತಿಳಿಸಿದೆ.







