Afghanistan: ಟ್ರಕ್ ಅಪಘಾತದಲ್ಲಿ 10 ಮಕ್ಕಳು ಸೇರಿದಂತೆ 18 ಮಂದಿ ಮೃತ್ಯು

ಸಾಂದರ್ಭಿಕ ಚಿತ್ರ
ಜಲಾಲಾಬಾದ್,ಮೇ 30: ಪೂರ್ವ ಅಫ್ಘಾನಿಸ್ತಾನದಲ್ಲಿ ಶನಿವಾರ ಟ್ರಕ್ಕೊಂದು ಮಗುಚಿ ಬಿದ್ದು ಸಂಭವಿಸಿದ ಅವಘಡದಲ್ಲಿ 10 ಮಂದಿ ಮಕ್ಕಳು ಸೇರಿದಂತೆ ವಾಹನದಲ್ಲಿದ್ದ 18 ಮಂದಿ ಮೃತಪಟ್ಟಿದ್ದಾರೆ.
ಪಾಕಿಸ್ತಾನದಲ್ಲಿ ವಾಸಿಸುತ್ತಿರುವ ಈ ಕುಟುಂಬಗಳು ಅಫ್ಘಾನಿಸ್ತಾನಕ್ಕೆ ವಾಪಸಾಗುತ್ತಿದ್ದಾಗ ಅವಘಡ ಸಂಭವಿಸಿದೆಯೆಂದು ಲಾಗ್ಮಾನ್ ಪ್ರಾಂತದ ರಾಜ್ಯಪಾಲರ ವಕ್ತಾರ ಅಬ್ದುಲ್ ಮಲಿಕ್ ನಿಯಾಝೆಯ್ ಅವರು ತಿಳಿಸಿದ್ದಾರೆ. ಪೂರ್ವ ಅಫ್ಘಾನಿಸ್ತಾನದ ನಗರವಾದ ಜಲಾಲಾಬಾದ್ ಹಾಗೂ ರಾಜಧಾನಿ ಕಾಬೂಲ್ ಮಧ್ಯೆ ಇರುವ ರಸ್ತೆಯಲ್ಲಿ ಈ ದುರಂತ ಸಂಭವಿಸಿದೆ.
ಘಟನೆಯಲ್ಲಿ 10 ಮಂದಿ ಮಕ್ಕಳು, ಐವರು ಮಹಿಳೆಯರು ಹಾಗೂ ಮೂವರು ಪುರುಷರು ಮೃತಪಟ್ಟಿದ್ದಾರೆ ಹಾಗೂ ಇತರ 29 ಮಂದಿ ಗಾಯಗೊಂಡಿದ್ದಾರೆಂದು ವಕ್ತಾರರು ತಿಳಿಸಿದ್ದಾರೆ.
Next Story




