ಶನಿವಾರ ತಡರಾತ್ರಿ ಅಫ್ಘಾನ್ನ ದಾಳಿ; ಪಾಕ್ ಪ್ರತಿದಾಳಿ ಎರಡೂ ಕಡೆ ವ್ಯಾಪಕ ಸಾವು-ನೋವು : ವರದಿ

Screengrab : X
ಅಫ್ಘಾನಿಸ್ತಾನ-ಪಾಕಿಸ್ತಾನ ಗಡಿಯಲ್ಲಿ ಘರ್ಷಣೆ ಉಲ್ಬಣ
ಕಾಬೂಲ್, ಅ.12: ಶನಿವಾರ ತಡರಾತ್ರಿ ಅಫ್ಘಾನ್ ಪಡೆಗಳು ಪಾಕಿಸ್ತಾನದ ಗಡಿಠಾಣೆಗಳ ಮೇಲೆ ನಡೆಸಿದ ದಾಳಿಯಲ್ಲಿ ಪಾಕಿಸ್ತಾನದ ಕನಿಷ್ಠ 58 ಸೈನಿಕರನ್ನು ಹತ್ಯೆ ಮಾಡಿದ್ದು 30ಕ್ಕೂ ಅಧಿಕ ಯೋಧರು ಗಾಯಗೊಂಡಿದ್ದಾರೆ. ಪಾಕ್ ಸೇನೆಯ 25 ಠಾಣೆಗಳನ್ನು ವಶಕ್ಕೆ ಪಡೆದಿರುವುದಾಗಿ ಅಫ್ಘಾನಿಸ್ತಾನದ ರಕ್ಷಣಾ ಇಲಾಖೆ ಹೇಳಿದೆ.
ಈ ವಾರ ಪಾಕಿಸ್ತಾನ ನಡೆಸಿದ್ದ ವೈಮಾನಿಕ ದಾಳಿಗೆ ಇದು ಪ್ರತೀಕಾರ ಕ್ರಮವಾಗಿದೆ. ಖತರ್ ಮತ್ತು ಸೌದಿ ಅರೆಬಿಯಾದ ಕೋರಿಕೆಯ ಮೇರೆಗೆ ದಾಳಿಯನ್ನು ನಿಲ್ಲಿಸಲಾಗಿದ್ದು ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಅಫ್ಘಾನಿಸ್ತಾನದ ರಕ್ಷಣಾ ಇಲಾಖೆ ರವಿವಾರ ಹೇಳಿಕೆ ನೀಡಿದೆ.
ಅಫ್ಘಾನಿಸ್ತಾನದ ಪಡೆಗಳು ನಡೆಸಿದ ಅಪ್ರಚೋದಿತ ಗುಂಡಿನ ದಾಳಿಗೆ ನಮ್ಮ ಪಡೆಗಳು ಸೂಕ್ತ ರೀತಿಯಲ್ಲಿ ಪ್ರತ್ಯುತ್ತರ ನೀಡಿದ್ದು 200ಕ್ಕೂ ಹೆಚ್ಚು ಅಫ್ಘಾನ್ ತಾಲಿಬಾನ್ ಯೋಧರು ಹತರಾಗಿದ್ದಾರೆ. ಅಫ್ಘಾನಿಸ್ತಾನದ 28 ಮಿಲಿಟರಿ ಠಾಣೆಗಳನ್ನು ವಶಪಡಿಸಿಕೊಂಡಿದ್ದು ಗಡಿಯನ್ನು ಮುಚ್ಚಿರುವುದಾಗಿ ಪಾಕಿಸ್ತಾನದ ರಕ್ಷಣಾ ಇಲಾಖೆ ಪ್ರತಿಪಾದಿಸಿದೆ.
Next Story





