ಪಾಕಿಸ್ತಾನದೊಂದಿಗೆ ರಾಜತಾಂತ್ರಿಕ ಸಂಬಂಧ ಸುಧಾರಣೆಗೆ ಅಫ್ಘಾನಿಸ್ತಾನ ಸ್ವಾಗತ

ಸಾಂದರ್ಭಿಕ ಚಿತ್ರ
ಕಾಬೂಲ್: ಪಾಕಿಸ್ತಾನದೊಂದಿಗೆ ರಾಜತಾಂತ್ರಿಕ ಸಂಬಂಧ ಸುಧಾರಿಸುವುದನ್ನು ಅಫ್ಘಾನಿಸ್ತಾನ ಸ್ವಾಗತಿಸುತ್ತದೆ. ಮುಂದಿನ ದಿನಗಳಲ್ಲಿ ವಿದೇಶಾಂಗ ಸಚಿವರು ಪಾಕಿಸ್ತಾನಕ್ಕೆ ಭೇಟಿ ನೀಡಲಿದ್ದಾರೆ ಎಂದು ಅಫ್ಘಾನಿಸ್ತಾನದ ವಿದೇಶಾಂಗ ಇಲಾಖೆಯ ಹೇಳಿಕೆ ತಿಳಿಸಿದೆ.
ಕಾಬೂಲ್ನಲ್ಲಿ ನಿಯೋಜಿಸಲಾಗಿರುವ ಚಾರ್ಜ್ ಡಿ'ಅಫೇರ್ಸ್ ಅನ್ನು ರಾಯಭಾರಿ ಶ್ರೇಣಿಗೆ ಉನ್ನತೀಕರಿಸುವುದಾಗಿ ಪಾಕಿಸ್ತಾನ ಶುಕ್ರವಾರ ಹೇಳಿತ್ತು. ಇದಕ್ಕೆ ಪ್ರತಿಯಾಗಿ ಇಸ್ಲಾಮಾಬಾದ್ನಲ್ಲಿರುವ ತನ್ನ ಪ್ರತಿನಿಧಿಯನ್ನೂ ಮೇಲ್ದರ್ಜೆಗೇರಿಸುವುದಾಗಿ ಅಫ್ಘಾನಿಸ್ತಾನ ಘೋಷಿಸಿದೆ.
Next Story





