ದ.ಆಫ್ರಿಕಾ ಚುನಾವಣೆ: ಎಎನ್ಸಿಗೆ ಬಹುಮತ ನಷ್ಟ
ಸಾಂದರ್ಭಿಕ ಚಿತ್ರ | PC : NDTV
ಜೊಹಾನ್ಸ್ಬರ್ಗ್: ದಕ್ಷಿಣ ಆಫ್ರಿಕಾದಲ್ಲಿ ನಡೆದ ಮಹತ್ವದ ಚುನಾವಣೆಯಲ್ಲಿ ಆಡಳಿತಾರೂಢ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್(ಎಎನ್ಸಿ) ಪಕ್ಷ ಬಹುಮತ ಕಳೆದುಕೊಂಡಿರುವುದಾಗಿ ವರದಿಯಾಗಿದೆ.
99%ದಷ್ಟು ಮತ ಎಣಿಕೆಯ ಬಳಿಕ ಎಎನ್ಸಿ 40%ಕ್ಕಿಂತ ಸ್ವಲ್ಪ ಹೆಚ್ಚು ಮತಗಳನ್ನು ಪಡೆದಿದೆ. ಆಫ್ರಿಕಾದ ಚುನಾವಣಾ ಆಯೋಗ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಲಿದ್ದು ಎಎನ್ಸಿ 50% ಗೆರೆಯನ್ನು ದಾಟುವ ಸಾಧ್ಯತೆಯಿಲ್ಲ. ಇದೀಗ ಅಧಿಕಾರದಲ್ಲಿ ಮುಂದುವರಿಯಲು ಹಾಲಿ ಅಧ್ಯಕ್ಷ ಸಿರಿಲ್ ರಮಫೋಸ ಇತರ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಬೇಕಿದೆ.
ಪ್ರಮುಖ ವಿಪಕ್ಷ ಮುಖಂಡ ಜಾನ್ ಸ್ಟೀನ್ಹುಸೇನ್ ಅವರ ಡೆಮೊಕ್ರಟಿಕ್ ಅಲಯನ್ಸ್(ಡಿಎ) 21%, ಮಾಜಿ ಅಧ್ಯಕ್ಷ, ಎಎನ್ಸಿಯಿಂದ ಹೊರಬಂದು ಪ್ರತ್ಯೇಕ ಪಕ್ಷ ಸ್ಥಾಪಿಸಿದ್ದ ಜಾಕೊಬ್ ಝುಮಾ ಅವರ ಎಂಕೆ ಪಕ್ಷಕ್ಕೆ 14%, ಇಕನಾಮಿಕ್ ಫ್ರೀಢಂ ಪಕ್ಷ 9% ಮತ ಪಡೆದಿದೆ. ಎಎನ್ಸಿ ಪಕ್ಷ ಡಿಎ ಪಕ್ಷ ಅಥವಾ ಎಂಕೆ ಪಕ್ಷದ ಜತೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
Next Story