ಸಿರಿಯ ತರಕಾರಿ ಮಾರುಕಟ್ಟೆ ಮೇಲೆ ವಾಯು ದಾಳಿ: 9 ಸಾವು, 30 ಮಂದಿಗೆ ಗಾಯ

Photo: NDTV.com
ಡಮಾಸ್ಕಸ್ (ಸಿರಿಯ): ವಾಯುವ್ಯ ಸಿರಿಯದಲ್ಲಿ ರವಿವಾರ ತರಕಾರಿ ಮಾರುಕಟ್ಟೆಯೊಂದರ ಮೇಲೆ ನಡೆದ ವಾಯು ದಾಳಿಯಲ್ಲಿ ಕನಿಷ್ಠ 9 ಮಂದಿ ಮೃತಪಟ್ಟಿದ್ದಾರೆ.
ಸಿರಿಯ ಅಧ್ಯಕ್ಷ ಬಶರ್ ಅಸ್ಸಾದ್ರ ಮಿತ್ರನಾಗಿರುವ ರಶ್ಯವು ಪ್ರತಿಪಕ್ಷಗಳ ಹಿಡಿತದಲ್ಲಿರುವ ಜಿಸರ್ ಅಲ್-ಶುಘುರ್ ಪಟ್ಟಣದ ಮೇಲೆ ದಾಳಿ ನಡೆಸಿದೆ ಎಂದು ಬ್ರಿಟನ್ ರಲ್ಲಿರುವ ಸಿರಿಯ ಮಾನವಹಕ್ಕುಗಳ ವೀಕ್ಷಣಾಲಯ ಎಂಬ ಸಂಘಟನೆ ಹೇಳಿದೆ. ಈ ಪಟ್ಟಣವು ಟರ್ಕಿ ಗಡಿಗೆ ಹೊಂದಿಕೊಂಡಿದೆ.
30ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಹಾಗೂ ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎಂದು ಸಿರಿಯದ ನಾಗರಿಕ ರಕ್ಷಣಾ ಸಂಘಟನೆ ‘ವೈಟ್ ಹೆಲ್ಮೆಟ್ಸ್’ ತಿಳಿಸಿದೆ.
‘‘ಗಂಭೀರವಾಗಿ ಗಾಯಗೊಂಡವರು ಆಸ್ಪತ್ರೆ ತಲುಪಿದ ಬಳಿಕ ಸಾಯುತ್ತಿದ್ದಾರೆ ಎಂಬ ವರದಿಗಳು ನಮಗೆ ಬಂದಿವೆ’’ ಎಂದು ವೈಟ್ ಹೆಲ್ಮೆಟ್ಸ್ನ ಅಹ್ಮದ್ ಯಝೀಜಿ ‘ಅಸೋಸಿಯೇಟಡ್ ಪ್ರೆಸ್’ಗೆ ತಿಳಿಸಿದರು.
Next Story