Al-Aqsa ಮಸೀದಿಯ ಆವರಣಕ್ಕೆ ನುಗ್ಗಿ ಧ್ವಜ ಪ್ರದರ್ಶಿಸಿದ ಇಸ್ರೇಲ್ ಸಚಿವ ಬೆನ್ಗ್ವಿರ್

Photo Credit : aljazeera.com
ಜೆರುಸಲೇಂ, ಮೇ 14: ಇಸ್ರೇಲ್ನ ಕಟ್ಟಾ ಬಲಪಂಥೀಯ ಸಚಿವ ಇಟಮರ್ ಬೆನ್-ಗ್ವಿರ್ ಗುರುವಾರ ಅಲ್-ಅಕ್ಸಾ ಮಸೀದಿಯ ಕಂಪೌಂಡ್ನ ಒಳಗೆ ನುಗ್ಗಿ ಇಸ್ರೇಲ್ನ ಧ್ವಜವನ್ನು ಪ್ರದರ್ಶಿಸಿದರು ಎಂದು ವರದಿಯಾಗಿದೆ.
ಜೆರುಸಲೇಂ ದಿನಾಚರಣೆಯ ಅಂಗವಾಗಿ ಆಕ್ರಮಿತ ಪೂರ್ವ ಜೆರುಸಲೇಂನ ರಸ್ತೆಗಳಲ್ಲಿ ಸಾವಿರಾರು ಯೆಹೂದಿ ಪ್ರಜೆಗಳು ರ್ಯಾಲಿ ನಡೆಸಿದ್ದಾರೆ. ಓಲ್ಡ್ ಸಿಟಿಯನ್ನು ಪ್ರವೇಶಿಸುವ ಅನಿವಾಸಿ ಫೆಲೆಸ್ತೀನೀಯರ ಮೇಲೆ ಇಸ್ರೇಲಿ ಪಡೆಗಳು ನಿರ್ಬಂಧಗಳನ್ನು ವಿಧಿಸಿವೆ. ಹೆರೋಡ್ಸ್ ಗೇಟ್ ಮತ್ತು ಡಮಾಸ್ಕಸ್ ಗೇಟ್ ಪ್ರದೇಶಗಳನ್ನು ತಡೆಹಿಡಿದವು ಮತ್ತು ಅಂಗಡಿಗಳನ್ನು ಮುಚ್ಚುವಂತೆ ಆದೇಶಿಸಿದವು ಎಂದು ಮಾಧ್ಯಮಗಳು ವರದಿ ಮಾಡಿವೆ.
Next Story




