ಕೆಂಪುಕೋಟೆ ದಾಳಿಯಲ್ಲಿ ಅಲ್ಖೈದಾ ಕೈವಾಡ: ವಿಶ್ವಸಂಸ್ಥೆ ಭದ್ರತಾ ಮಂಡಳಿ ವರದಿ

Photo Credit : PTI
ವಿಶ್ವಸಂಸ್ಥೆ, ಆ.13: ಹೊಸದಿಲ್ಲಿಯ ಕೆಂಪುಕೋಟೆಯ ಬಳಿ ನವೆಂಬರ್ 2025ರಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ‘ಭಾರತೀಯ ಉಪಖಂಡದ ಅಲ್ಖೈದಾ’ (AQIS) ಸಂಘಟನೆ ನಡೆಸಿದೆ ಎಂದು ಇತ್ತೀಚಿನ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ವರದಿಯೊಂದು ಅಧಿಕೃತವಾಗಿ ಆರೋಪಿಸಿದೆ.
ICS ಮತ್ತು ಅಲ್ಖೈದಾ ಕುರಿತ ನಿರ್ಬಂಧ ಸಮಿತಿಗೆ ಸಲ್ಲಿಸಲಾದ ವರದಿಯಲ್ಲಿ ಈ ಮಾಹಿತಿ ಉಲ್ಲೇಖಿಸಲಾಗಿದೆ.
AQIS ಈಗ ಹೆಚ್ಚು ಸುಸಂಘಟಿತ ಪ್ರಾದೇಶಿಕ ಭಯೋತ್ಪಾದಕ ಜಾಲವಾಗಿ ಬೆಳೆದಿದ್ದು, ಲಾಜಿಸ್ಟಿಕ್ಸ್ ಮತ್ತು ಆರ್ಥಿಕ ಜಾಲಗಳನ್ನು ಕಾಯ್ದುಕೊಳ್ಳುತ್ತಲೇ ಸಣ್ಣ ಹಾಗೂ ವಿಕೇಂದ್ರೀಕೃತ ಸೆಲ್ ಗಳ ಮೂಲಕ ಕಾರ್ಯಾಚರಣೆ ನಡೆಸುತ್ತಿದೆ. ಈ ಗುಂಪು ಆಗ್ನೇಯ ಅಫ್ಘಾನಿಸ್ತಾನದಲ್ಲಿ ಇನ್ನೂ ಸಕ್ರಿಯವಾಗಿದೆ ಮತ್ತು ಬಾಂಗ್ಲಾದೇಶದಲ್ಲಿ ಕಾರ್ಯಾಚರಣೆಯ ಸೆಲ್ ಗಳನ್ನು ಸ್ಥಾಪಿಸಲು ಯತ್ನಿಸುತ್ತಿದೆ ಎಂದೂ UN ವರದಿ ಹೇಳಿದೆ.
Next Story




