ಅಲಾಸ್ಕಪಾಕ್ಸ್ ಸೋಂಕು: ಮೊದಲ ಸಾವಿನ ಪ್ರಕರಣ ದಾಖಲು

Photo : Alaska Health department
ವಾಷಿಂಗ್ಟನ್ : ಸಿಡುಬು ರೋಗವನ್ನು ಹೋಲುವ, ಅತ್ಯಂತ ಮಾರಣಾಂತಿಕ ಸೋಂಕು ಅಲಾಸ್ಕಪಾಕ್ಸ್ನಿಂದ ಅಮೆರಿಕದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು ಇದು ಅಲಾಸ್ಕಪಾಕ್ಸ್ನಿಂದ ದಾಖಲಾದ ಪ್ರಥಮ ಸಾವಿನ ಪ್ರಕರಣವಾಗಿದೆ.
ಈ ವೈರಸ್ ಅಮೆರಿಕದ ಅಲಾಸ್ಕಾ ರಾಜ್ಯದ ಫೈರ್ ಬ್ಯಾಂಕ್ಸ್ ನಲ್ಲಿ 2015ರಲ್ಲಿ ಮೊದಲ ಬಾರಿ ವರದಿಯಾಗಿದ್ದು 2015ರಿಂದ ಕೇವಲ 7 ಸೋಂಕು ಪ್ರಕರಣ ಮಾತ್ರ ವರದಿಯಾಗಿದೆ. ಎಕೆವಿಪಿ ಎಂದು ಕರೆಯಲಾಗುವ ಈ ಸೋಂಕು ಶಕಗಳಿಂದ(ಉದ್ದವಾದ ಬಾಚಿ ಹಲ್ಲನ್ನು ಹೊಂದಿರುವ ಇಲಿ, ಅಳಿಲು ಇತ್ಯಾದಿ ಸಸ್ತನಿಗಳು) ಮಾನವನಿಗೆ ಹರಡುತ್ತದೆ. ಚರ್ಮದ ಮೇಲೆ ಸಣ್ಣ ಹುಣ್ಣು, ದುಗ್ಧರಸ ಗ್ರಂಥಿ ಊದಿಕೊಳ್ಳುವುದು ಮತ್ತು ಸ್ನಾಯುನೋವು ಈ ಸೋಂಕಿನ ಲಕ್ಷಣವಾಗಿದೆ. ಈ ಸೋಂಕಿನಿಂದ ಮೃತಪಟ್ಟ ವ್ಯಕ್ತಿ ಅಲಾಸ್ಕಾದ ಕೆನೆಯ್ ದ್ವೀಪಕಲ್ಪದಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದ ಮತ್ತು ಬೆಕ್ಕು ಕಚ್ಚಿದ್ದರಿಂದ ಸೋಂಕಿಗೆ ಒಳಗಾಗಿದ್ದ ಎಂದು ಮೂಲಗಳನ್ನು ಉಲ್ಲೇಖಿಸಿ `ದಿ ಟೆಲಿಗ್ರಾಫ್' ವರದಿ ಮಾಡಿದೆ.
Next Story





