ಅಮೆರಿಕ | ಸರಕಾರದ ವಿರುದ್ಧ ಸುದ್ದಿಪ್ರಸಾರ ಮಾಡಿದರೆ ಲೈಸೆನ್ಸ್ ರದ್ದುಗೊಳಿಸುವುದಾಗಿ ಟಿವಿ ವಾಹಿನಿಗಳಿಗೆ ಟ್ರಂಪ್ ಎಚ್ಚರಿಕೆ

ಡೊನಾಲ್ಡ್ ಟ್ರಂಪ್ | PC : PTI
ವಾಷಿಂಗ್ಟನ್, ಸೆ.19: ತನ್ನ ಆಡಳಿತದ ವಿರುದ್ಧ ಟಿವಿ ವಾಹಿನಿಗಳು ನಕಾರಾತ್ಮಕ (ನೆಗೆಟಿವ್) ಸುದ್ದಿ ಪ್ರಸಾರ ಮಾಡಿದರೆ ಲೈಸೆನ್ಸ್ ರದ್ದುಗೊಳಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
ಹತ್ಯೆಗೊಳಗಾದ ಬಲಪಂಥೀಯ ಕಾರ್ಯಕರ್ತ ಚಾರ್ಲಿ ಕಿರ್ಕ್ ಕುರಿತು ಕಾರ್ಯಕ್ರಮ ನಿರೂಪಕರು ನೀಡಿದ ಹೇಳಿಕೆಯು ವಿವಾದಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ಬುಧವಾರ ಎಬಿಸಿ ಚಾನೆಲ್ನಲ್ಲಿ ಪ್ರಸಾರವಾಗಬೇಕಿದ್ದ `ಜಿಮ್ಮಿ ಕಿಮೆಲ್ ಲೈವ್' ಕಾಮಿಡಿ ಶೋ ರದ್ದಾಗಿತ್ತು. ಶೋ ರದ್ದುಪಡಿಸಿರುವುದು ಸರಿಯಾದ ಕ್ರಮ ಎಂದು ಟ್ರಂಪ್ ಶ್ಲಾಘಿಸಿದ್ದಾರೆ.
ಟಿವಿ ವಾಹಿನಿಗಳು ಕೆಟ್ಟ ಪ್ರಚಾರದಲ್ಲಿ ನಿರತವಾಗಿವೆ. ಟ್ರಂಪ್ ವಿರುದ್ಧ ನಕಾರಾತ್ಮಕ ಸುದ್ದಿ ಪ್ರಸಾರ ಮಾಡುವುದೇ ಅವರ ಕೆಲಸವಾಗಿದೆ. ಅವರ ಲೈಸೆನ್ಸ್ ರದ್ದುಪಡಿಸುವತ್ತ ನಾನು ಆಲೋಚಿಸುತ್ತಿದ್ದೇನೆ. ಫೆಡರಲ್ ಕಮ್ಯುನಿಕೇಷನ್ ಆಯೋಗದ ಅಧ್ಯಕ್ಷ ಬ್ರೆಂಡನ್ ಕಾರ್ ಇದನ್ನು ನಿರ್ಧರಿಸುತ್ತಾರೆ' ಎಂದು ಟ್ರಂಪ್ ಹೇಳಿರುವುದಾಗಿ ವರದಿಯಾಗಿದೆ.
Next Story





