ಅಮೆರಿಕ | ಎಲ್ಲಾ ವಿದೇಶಿಯರಿಗೆ ಹೊಸ ಪ್ರಯಾಣ ನಿಯಮ ಜಾರಿ

ಸಾಂದರ್ಭಿಕ ಚಿತ್ರ
ವಾಷಿಂಗ್ಟನ್, ಅ.25: ಗ್ರೀನ್ಕಾರ್ಡ್ ಹೊಂದಿರುವವರು ಸೇರಿದಂತೆ ದೇಶವನ್ನು ಪ್ರವೇಶಿಸುವ ಮತ್ತು ನಿರ್ಗಮಿಸುವ ಎಲ್ಲಾ ವಿದೇಶಿಯರಿಗೆ ಅಮೆರಿಕ ಹೊಸ ಪ್ರಯಾಣ ನಿಯಮವನ್ನು ಜಾರಿಗೊಳಿಸಿದೆ.
ಅವಧಿ ಮೀರಿದ ವೀಸಾ ಬಳಸುವ, ಪಾಸ್ಪೋರ್ಟ್ ವಂಚನೆ ನಡೆಸುವ ವಿದೇಶಿಯರನ್ನು ಪತ್ತೆಹಚ್ಚಲು ಮುಖ ಗುರುತಿಸುವಿಕೆಯ ತಂತ್ರಜ್ಞಾನದ ಬಳಕೆಯನ್ನು ಅಮೆರಿಕಾ ಈಗ ವಿಸ್ತರಿಸುತ್ತಿರುವುದಾಗಿ ಅಮೆರಿಕದ ಕಸ್ಟಮ್ಸ್ ಮತ್ತು ಗಡಿ ಭದ್ರತಾ ಏಜೆನ್ಸಿ(ಸಿಪಿಬಿ) ಘೋಷಿಸಿದೆ. ರಾಷ್ಟ್ರೀಯ ಭದ್ರತೆಯನ್ನು ಹೆಚ್ಚಿಸಲು ದೇಶವನ್ನು ಪ್ರವೇಶಿಸುವ ಮತ್ತು ದೇಶದಿಂದ ನಿರ್ಗಮಿಸುವ ಪ್ರತಿಯೊಬ್ಬ ವಿದೇಶಿಯರ ಛಾಯಾಚಿತ್ರ ದಾಖಲೆ ಪಡೆಯುವ ಯೋಜನೆಯಿದು. ಹೊಸ ನಿಯಮಗಳು ದೇಶದಲ್ಲಿ ವಾಸಿಸುವ ವಲಸಿಗರು ಮತ್ತು ಗ್ರೀನ್ಕಾರ್ಡ್ ಹೊಂದಿರುವವರು ಸೇರಿದಂತೆ ಎಲ್ಲಾ ವಿದೇಶೀಯರಿಗೆ ಅನ್ವಯಿಸುತ್ತದೆ ಎಂದು ಹೇಳಿಕೆ ತಿಳಿಸಿದೆ.
Next Story





