ನಾವು ಅಮೆರಿಕನ್ನರಾಗಲು ಬಯಸುವುದಿಲ್ಲ: ಗ್ರೀನ್ಲ್ಯಾಂಡ್ನ 5 ರಾಜಕೀಯ ಪಕ್ಷಗಳ ಹೇಳಿಕೆ

Photo CRedit : AP \ PTI
ನುಕ್, ಜ.10: ಗ್ರೀನ್ಲ್ಯಾಂಡನ್ನು ವಶಪಡಿಸಿಕೊಳ್ಳುವುದಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ ಬೆದರಿಕೆಗೆ ಪ್ರತ್ಯುತ್ತರವಾಗಿ ಗ್ರೀನ್ಲ್ಯಾಂಡ್ನ ಐದು ಪ್ರಮುಖ ರಾಜಕೀಯ ಪಕ್ಷಗಳ ನಾಯಕರು, ತಾವು ಅಮೆರಿಕನ್ನರಾಗಲು ಬಯಸುವುದಿಲ್ಲ ಮತ್ತು ಗ್ರೀನ್ಲ್ಯಾಂಡ್ನ ಭವಿಷ್ಯವನ್ನು ಅದರ ಪ್ರಜೆಗಳು ಮಾತ್ರ ನಿರ್ಧರಿಸಬೇಕು ಎಂದು ಹೇಳಿದ್ದಾರೆ.
ನಾವು ಅಮೆರಿಕಾ ಅಥವಾ ಡೆನ್ಮಾರ್ಕ್ನ ನಿಯಂತ್ರಣದಲ್ಲಿರಲು ಬಯಸುವುದಿಲ್ಲ. ನಾವು ಗ್ರೀನ್ಲ್ಯಾಂಡರ್ಗಳಾಗಿ ಇರಲು ಮಾತ್ರ ಬಯಸುತ್ತೇವೆ. ನಮ್ಮ ಭೂಪ್ರದೇಶದ ಮೇಲೆ ನಮ್ಮ ಜನರಿಗೆ ಇರುವ ಅಧಿಕಾರವನ್ನು ತಿರಸ್ಕರಿಸುವ ಅಮೆರಿಕಾದ ಧೋರಣೆಯನ್ನು ಒಪ್ಪುವುದಿಲ್ಲ ಎಂದು ಗ್ರೀನ್ಲ್ಯಾಂಡ್ ಸಂಸತ್ತಿನಲ್ಲಿ ಮಂಡಿಸಲಾದ ಹೇಳಿಕೆಯಲ್ಲಿ ಐದು ಪಕ್ಷಗಳ ನಾಯಕರು ಒತ್ತಿಹೇಳಿದ್ದಾರೆ.
Next Story





