ಅಮೆರಿಕ: ಸಿಐಎ ಕೇಂದ್ರಕಚೇರಿಯ ಹೊರಗಡೆ ಶೂಟೌಟ್

ವಾಷಿಂಗ್ಟನ್: ಅಮೆರಿಕದ ವರ್ಜೀನಿಯಾ ರಾಜ್ಯದ ಲ್ಯಾಂಗ್ಲೆಯಲ್ಲ ಸಿಐಎ(ಕೇಂದ್ರೀಯ ತನಿಖಾ ಏಜೆನ್ಸಿ) ಕೇಂದ್ರ ಕಚೇರಿಯ ಹೊರಗಡೆ ಗುರುವಾರ ವ್ಯಕ್ತಿಯೊಬ್ಬನ ಮೇಲೆ ಗುಂಡಿನ ದಾಳಿ ನಡೆದಿರುವುದಾಗಿ ಮೂಲಗಳನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ.
ಗುಂಡಿನ ದಾಳಿ ನಡೆದಿರುವುದನ್ನು ಸಿಐಎ ವಕ್ತಾರರು ದೃಢಪಡಿಸಿಲ್ಲ. ಆದರೆ ಕೇಂದ್ರ ಕಚೇರಿಯ ಹೊರಗಡೆ ಭದ್ರತೆಗೆ ಸಂಬಂಧಿಸಿದ ಘಟನೆಯೊಂದು ನಡೆದಿದೆ. ಗೇಟಿನ ಹೊರಗೆ ಓರ್ವ ವ್ಯಕ್ತಿಯನ್ನು ಭದ್ರತಾ ಸಿಬ್ಬಂದಿ ತಡೆದು ಬಳಿಕ ವಶಕ್ಕೆ ಪಡೆದಿರುವುದಾಗಿ ವಕ್ತಾರರು ಹೇಳಿದ್ದಾರೆ ಎಂದು ವರದಿಯಾಗಿದೆ.
Next Story





