ದಾಳಿ ಮಾಡಲು ಅಮೆರಿಕಕ್ಕೆ ಇನ್ನೂ ‘ಒಂದೆರಡು ನೆಲೆಗಳು’ ಬಾಕಿ: ಟ್ರಂಪ್

ಡೊನಾಲ್ಡ್ ಟ್ರಂಪ್ | Photo Credit : PTI
ವಾಶಿಂಗ್ಟನ್, ನ.1: ಇರಾನ್ ನಲ್ಲಿ ದಾಳಿ ನಡೆಸಲು ಅಮೆರಿಕಕ್ಕೆ ಇನ್ನೂ ಒಂದು ಅಥವಾ ಎರಡು ನೆಲೆಗಳು ಬಾಕಿ ಉಳಿದಿವೆ. ಇವುಗಳಲ್ಲಿ ‘ಪಿಕ್ಆಕ್ಸ್ ಮೌಂಟೇನ್’ ಎಂಬ ಶಂಕಿತ ಭೂಗತ ಪರಮಾಣು ಸಂಕೀರ್ಣವೂ ಸೇರಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
‘ಇರಾನ್ ಎಂದಿಗೂ ಪರಮಾಣು ಅಸ್ತ್ರ ಹೊಂದಲು ಸಾಧ್ಯವಿಲ್ಲ. ಅವರು ಒಪ್ಪಂದ ಮಾಡಿಕೊಳ್ಳಲು ಬಯಸುತ್ತಿದ್ದಾರೆ. ಮಾತುಕತೆ ಉತ್ತಮವಾಗಿ ನಡೆಯುತ್ತಿವೆ. ಆದರೆ ಅವರನ್ನು ಸಂಪೂರ್ಣವಾಗಿ ನಂಬಲು ಸಾಧ್ಯವಿಲ್ಲ. ಅವರು ಒಪ್ಪಂದ ಮಾಡಿಕೊಳ್ಳುತ್ತಾರೆ, ನಂತರ ಅದರಿಂದ ಹಿಂದೆ ಸರಿಯುತ್ತಾರೆ’ ಎಂದು ಟ್ರಂಪ್ ತಮ್ಮ ಫ್ಲೋರಿಡಾ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ಅಮೆರಿಕ ಈಗಾಗಲೇ ಇರಾನ್ ನ ಬಹುತೇಕ ಮಿಲಿಟರಿ ಮತ್ತು ಪರಮಾಣು ಸಾಮರ್ಥ್ಯಗಳನ್ನು ಧ್ವಂಸಗೊಳಿಸಿದೆ. ಆದರೆ ಇನ್ನೂ ಕೆಲವು ನೆಲೆಗಳು ಉಳಿದಿದ್ದು, ಅವುಗಳತ್ತ ಗಮನಹರಿಸಬೇಕಿದೆ ಎಂದು ಅವರು ಪ್ರತಿಪಾದಿಸಿದರು.
Next Story




