ಅಮೆರಿಕ: ಇತಿಹಾಸ ನಿರ್ಮಿಸಿದ ಝೋಹ್ರಾನ್ ಮಮ್ದಾನಿ; ನ್ಯೂಯಾರ್ಕ್ ನ ನೂತನ ಮೇಯರ್ ಆಗಿ ಆಯ್ಕೆ

PC: x.com/ZohranKMamdani
ನ್ಯೂಯಾರ್ಕ್: ಅಮೇರಿಕಾದ ನ್ಯೂಯಾರ್ಕ್ ನಲ್ಲಿನ ಮೇಯರ್ ಹುದ್ದೆಗೆ ನಡೆದ ಚುನಾವಣೆಯಲ್ಲಿ ಝೋಹ್ರಾನ್ ಮಮ್ದಾನಿ ಅವರು ನ್ಯೂಯಾರ್ಕ್ ನ ನೂತನ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.
ಡೆಮೊಕ್ರಾಟ್ ಪಕ್ಷದ ಅಭ್ಯರ್ಥಿ ಇಂಡಿಯನ್ ಅಮೇರಿಕನ್, ಕೇವಲ 33 ವರ್ಷದ ಯುವ ನಾಯಕ, ಮುಸ್ಲಿಂ ಸಮುದಾಯದ ಝೋಹ್ರಾನ್ ಮಮ್ದಾನಿ ತಮ್ಮದೇ ಪಕ್ಷದ ಹಿರಿಯ ಹಾಗು ಪ್ರಭಾವೀ ನಾಯಕ ಆಂಡ್ರೂ ಕುಮೋ ಅವರನ್ನು ಸೋಲಿಸಿ ನ್ಯೂಯಾರ್ಕ್ ನ ಹೊಸ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.
80 ಲಕ್ಷ ಜನಸಂಖ್ಯೆಯ ನ್ಯೂಯಾರ್ಕ್ ನಗರ ನ್ಯೂಯಾರ್ಕ್ ಡೆಮೊಕ್ರಾಟರ ಭದ್ರಕೋಟೆ ಎಂದೇ ಪರಿಗಣಿಸಲ್ಪಟ್ಟ ನಗರ. ತಳಮಟ್ಟದಲ್ಲಿ ಸಾವಿರಾರು ಕಾರ್ಯಕರ್ತರ ಜಾಲವನ್ನೇ ಕಟ್ಟಿ ನಿಲ್ಲಿಸಿರುವ ಝೋಹ್ರಾನ್ ತನ್ನ ವಿಭಿನ್ನ ಪ್ರಚಾರ ತಂತ್ರದ ಮೂಲಕ ಜನರ ಗಮನ ಸೆಳೆದಿದ್ದರು.
Next Story





