ಸಾಗರೋತ್ತರ ನೆರವು ಕಡಿತಕ್ಕೆ ಅಸಮಾಧಾನ: ಬ್ರಿಟನ್ ಸಚಿವೆ ಅನ್ನೆಲೀಸ್ ಡಾಡ್ಸ್ ರಾಜೀನಾಮೆ

PC | X/@AnnelieseDodds
ಸಾಗರೋತ್ತರ ನೆರವು ಕಡಿತಕ್ಕೆ ಅಸಮಾಧಾನ: ಬ್ರಿಟನ್ ಸಚಿವೆ ಅನ್ನೆಲೀಸ್ ಡಾಡ್ಸ್ ರಾಜೀನಾಮೆ
ಲಂಡನ್: ವಿದೇಶಿ ನೆರವು ಬಜೆಟ್ ಅನ್ನು ಕಡಿತಗೊಳಿಸುವ ಮೂಲಕ ರಕ್ಷಣಾ ಖರ್ಚನ್ನು ಹೆಚ್ಚಿಸಲು ಪ್ರಧಾನಿ ಕೀರ್ ಸ್ಟಾರ್ಮರ್ ನಿರ್ಧರಿಸಿದ ಹಿನ್ನೆಲೆಯಲ್ಲಿ ಅಂತರಾಷ್ಟ್ರೀಯ ಅಭಿವೃದ್ಧಿ ಸಚಿವೆ ಅನ್ನೆಲೀಸ್ ಡಾಡ್ಸ್ ಶುಕ್ರವಾರ ರಾಜೀನಾಮೆ ನೀಡಿರುವುದಾಗಿ ವರದಿಯಾಗಿದೆ.
ರಕ್ಷಣಾ ವೆಚ್ಚವನ್ನು ಹೆಚ್ಚಿಸಲು ಯಾವುದೇ ಸುಲಭ ಮಾರ್ಗಗಳಿಲ್ಲ ಎಂಬುದು ನಿಜ. ಆದರೆ ಸಾಗರೋತ್ತರ ನೆರವು ಕಡಿತಗೊಳಿಸುವ ನಿರ್ಧಾರವನ್ನು ತಾನು ಒಪ್ಪುವುದಿಲ್ಲ ಎಂದು ಪ್ರಧಾನಿ ಸ್ಟಾರ್ಮರ್ ಗೆ ಬರೆದಿರುವ ಪತ್ರದಲ್ಲಿ ಅನ್ನೆಲಿಸ್ ಉಲ್ಲೇಖಿಸಿದ್ದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಬ್ರಿಟನ್ನ ರಕ್ಷಣಾ ವೆಚ್ಚವನ್ನು 2027ರ ವೇಳೆಗೆ ಜಿಡಿಪಿಯ 2.5%ಕ್ಕೆ ಹೆಚ್ಚಿಸಲಾಗುವುದು(ಈಗ 2.3%). ಇದಕ್ಕಾಗಿ ಸಾಗರೋತ್ತರ ನೆರವು ಬಜೆಟನ್ನು 0.3%(ಈಗ 0.5%)ಕ್ಕೆ ಇಳಿಸಲಾಗುವುದು ಎಂದು ಸ್ಟಾರ್ಮರ್ ಹೇಳಿದ್ದರು. ಇದನ್ನು ವಿರೋಧಿಸಿರುವ ಅನ್ನೆಲೀಸ್ ` ಸಾಗರೋತ್ತರ ನೆರವು ನಿಧಿಯನ್ನು ಭಾರೀ ಕಡಿತಗೊಳಿಸುವುದು ಅಗತ್ಯದ ಜನರನ್ನು ಆಹಾರ ಮತ್ತು ಆರೋಗ್ಯ ರಕ್ಷಣೆಯ ಸಹಾಯದಿಂದ ವಂಚಿತಗೊಳಿಸಲಿದೆ ಮತ್ತು ಬ್ರಿಟನ್ನ ಘನತೆಗೆ ಹಾನಿ ಎಸಗಲಿದೆ ಎಂದು ಹೇಳಿದ್ದಾರೆ.





