ಉಕ್ರೇನ್ ನ ಮತ್ತೊಂದು ಗ್ರಾಮ ರಶ್ಯದ ವಶಕ್ಕೆ: ವರದಿ

PC | REUTERS (ಸಾಂದರ್ಭಿಕ ಚಿತ್ರ)
ಮಾಸ್ಕೋ: ಉಕ್ರೇನಿನ ಡ್ನಿಪ್ರೊಪೆಟ್ರೋವ್ಸ್ಕ್ ಪ್ರಾಂತದಲ್ಲಿ ಮೊದಲ ಗ್ರಾಮವನ್ನು ರಶ್ಯದ ಪಡೆಗಳು ವಶಪಡಿಸಿಕೊಂಡಿರುವುದಾಗಿ ಸರ್ಕಾರಿ ಸ್ವಾಮ್ಯದ ರಿಯಾ ಸುದ್ದಿಸಂಸ್ಥೆ ಸೋಮವಾರ ವರದಿ ಮಾಡಿದೆ.
ಸುಮಿ ಪ್ರಾಂತದಲ್ಲಿ 200 ಚದರ ಕಿ.ಮೀ ಪ್ರದೇಶವನ್ನು ವಶಪಡಿಸಿಕೊಂಡ ಬಳಿಕ ಡ್ನಿಪ್ರೊಪೆಟ್ರೋವ್ಸ್ಕ್ ಪ್ರಾಂತದಲ್ಲಿ ಕಳೆದ ಎರಡು ತಿಂಗಳಲ್ಲಿ ರಶ್ಯವು 950 ಚದರ ಕಿ.ಮೀ ಪ್ರದೇಶವನ್ನು ವಶಪಡಿಸಿಕೊಂಡಿದೆ. ಈಗ ಉಕ್ರೇನ್ ನ 113,588 ಚದರ ಕಿ.ಮೀ ಪ್ರದೇಶ ರಶ್ಯದ ನಿಯಂತ್ರಣದಲ್ಲಿದೆ. ಡ್ನಿಪ್ರೊಪೆಟ್ರೋವ್ಸ್ಕ್ ಪ್ರಾಂತದ ಡ್ಯಚ್ನೋವ್ ಗ್ರಾಮ ಈಗ ರಶ್ಯದ ನಿಯಂತ್ರಣದಲ್ಲಿದೆ. ರಶ್ಯ ಶಾಂತಿಗೆ ಸಿದ್ಧವಿದೆ. ಆದರೆ ಹೆಚ್ಚಿನ ಭಾಗಗಳು ನಮ್ಮ ನಿಯಂತ್ರಣದಲ್ಲಿರುವ 4 ಪ್ರಾಂತಗಳಿಂದ ಉಕ್ರೇನ್ ಪಡೆ ಸಂಪೂರ್ಣ ಹಿಂದೆ ಸರಿಯಬೇಕು ಎಂದು ರಶ್ಯ ಆಗ್ರಹಿಸುತ್ತಿದೆ.
Next Story





