ಖತರ್ ಗೆ ಬೆಂಬಲ ಸೂಚಿಸಲು ಅರಬ್-ಇಸ್ಲಾಮಿಕ್ ಶೃಂಗಸಭೆ

PC : aljazeera.com
ದೋಹ, ಸೆ.14: ಕಳೆದ ವಾರ ಖತರ್ ನಲ್ಲಿ ಹಮಾಸ್ ನಾಯಕರನ್ನು ಗುರಿಯಾಗಿಸಿ ಇಸ್ರೇಲ್ ನಡೆಸಿದ ದಾಳಿಯ ಹಿನ್ನೆಲೆಯಲ್ಲಿ ಖತರ್ಗೆ ಬೆಂಬಲ ಸೂಚಿಸಿ ಸೋಮವಾರ ದೋಹಾದಲ್ಲಿ ಅರಬ್-ಇಸ್ಲಾಮಿಕ್ ಶೃಂಗಸಭೆ ನಡೆಯಲಿದೆ.
ಖತರ್ ಒಬ್ಬಂಟಿಯಾಗಿಲ್ಲ. ಅರಬ್ ಮತ್ತು ಇಸ್ಲಾಮಿಕ್ ರಾಷ್ಟ್ರಗಳು ಅದರೊಂದಿಗಿವೆ ಎಂಬ ಸಂದೇಶವನ್ನು ಶೃಂಗಸಭೆ ನೀಡಲಿದೆ ಎಂದು ಅರಬ್ ಲೀಗ್ ಪ್ರಧಾನ ಕಾರ್ಯದರ್ಶಿ ಅಹ್ಮದ್ ಅಬೂಲ್ ಘೈಟ್ ಅವರನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಶೃಂಗಸಭೆಯಲ್ಲಿ ಮಂಡಿಸಲಾಗುವ ಕರಡು ನಿರ್ಣಯದ ಬಗ್ಗೆ ಚರ್ಚಿಸಲು ಅರಬ್ ಲೀಗ್ನ ಸದಸ್ಯ ದೇಶಗಳ ಹಾಗೂ `ಆರ್ಗನೈಸೇಷನ್ ಆಫ್ ಇಸ್ಲಾಮಿಕ್ ಕೋಆಪರೇಷನ್' ನ ವಿದೇಶಾಂಗ ಸಚಿವರು ರವಿವಾರ ದೋಹಾದಲ್ಲಿ ಸಭೆ ಸೇರಿದ್ದಾರೆ ಎಂದು ವರದಿ ಹೇಳಿದೆ.
Next Story





