ಸೇನೆಯ ನೆರವು: ಒಪ್ಪಿಕೊಂಡ ಪಾಕ್ ಪ್ರಧಾನಿ

ಶಹಬಾಝ್ ಶರೀಫ್ | PHOTO : PTI
ಇಸ್ಲಮಾಬಾದ್, ಆ.11: ಸೇನೆಯ ಬೆಂಬಲವಿಲ್ಲದೆ ತಮ್ಮ ಸರಕಾರವನ್ನೂ ನಡೆಸಲು ಸಾಧ್ಯವಿರಲಿಲ್ಲ ಎಂದು ಪಾಕಿಸ್ತಾನದ ನಿರ್ಗಮಿತ ಪ್ರಧಾನಿ ಶಹಬಾಝ್ ಶರೀಫ್ ಒಪ್ಪಿಕೊಂಡಿದ್ದಾರೆ.
`ಜಿಯೊ ನ್ಯೂಸ್'ಗೆ ನೀಡಿದ ಸಂದರ್ಶನದಲ್ಲಿ `ಮಾಜಿ ಪ್ರಧಾನಿ ಇಮ್ರಾನ್ಖಾನ್ ಹೈಬ್ರೀಡ್ ಸರಕಾರವನ್ನು ಮುನ್ನಡೆಸುತ್ತಿದ್ದರು. ಇವತ್ತು ಪ್ರಪಂಚದಲ್ಲಿ ಹೈಬ್ರಿಡ್ ಆಡಳಿತದ ಅತ್ಯಂತ ಪ್ರಮುಖ ಉದಾಹರಣೆಗಳಲ್ಲಿ ಪಾಕಿಸ್ತಾನವೂ ಸೇರಿದೆ. ಸೇನೆ ಸೇರಿದಂತೆ ಪ್ರತೀ ಸರಕಾರಕ್ಕೂ ಪ್ರಮುಖ ಕ್ಷೇತ್ರಗಳ ಸಹಕಾರ ಅಗತ್ಯವಿದೆ' ಎಂದು ಹೇಳಿದ್ದಾರೆ.
Next Story