ಅಲ್-ಶಿಫಾ ಆಸ್ಪತ್ರೆ ನಿರ್ದೇಶಕರ ಬಂಧನ

ಮುಹಮ್ಮದ್ ಅಬು ಸಲ್ಮಿಯಾ | Photo: @RamiJarrah | X
ಗಾಝಾ: ಗಾಝಾ ಪಟ್ಟಿಯಲ್ಲಿರುವ ಅಲ್-ಶಿಫಾ ಆಸ್ಪತ್ರೆಯ ನಿರ್ದೇಶಕ ಮುಹಮ್ಮದ್ ಅಬು ಸಲ್ಮಿಯಾರನ್ನು ವಿಚಾರಣೆ ನಡೆಸಲು ವಶಕ್ಕೆ ಪಡೆದಿರುವುದನ್ನು ಇಸ್ರೇಲ್ ಗುರುವಾರ ದೃಢಪಡಿಸಿದೆ.
ಗಾಝಾ ಆಸ್ಪತ್ರೆಯನ್ನು ಹಮಾಸ್ ಕಾರ್ಯಾಚಣೆಯ ಕೇಂದ್ರಸ್ಥಾನವಾಗಿ ಬಳಸುತ್ತಿರುವ ಬಗ್ಗೆ ಪುರಾವೆ ಲಭಿಸಿದ್ದು ಈ ಬಗ್ಗೆ ಆಸ್ಪತ್ರೆಯ ನಿರ್ದೇಶಕರ ಹೇಳಿಕೆ ಪಡೆಯಲು ವಶಕ್ಕೆ ಪಡೆಯಲಾಗಿದೆ ಎಂದು ಇಸ್ರೇಲ್ ಸೇನೆ ಹೇಳಿದೆ. ` ನಿರ್ದೇಶಕರ ನಿರ್ವಹಣೆಯಿರುವ ಆಸ್ಪತ್ರೆಯಲ್ಲಿ ಹಮಾಸ್ನ ವ್ಯಾಪಕ ಭಯೋತ್ಪಾದಕ ಚಟುವಟಿಕೆ ನಡೆಯುತ್ತಿತ್ತು. ಈ ಬಗ್ಗೆ ಅವರ ಹೇಳಿಕೆ ಪಡೆಯಬೇಕಿದೆ' ಎಂದು ಹೇಳಿಕೆ ತಿಳಿಸಿದೆ. ಜತೆಗೆ ಆಸ್ಪತ್ರೆಯ ಇತರ ಕೆಲವು ಸಿಬ್ಬಂದಿಗಳನ್ನೂ ವಶಕ್ಕೆ ಪಡೆಯಲಾಗಿದೆ ಎಂದು ವರದಿಯಾಗಿದೆ.
ಅಲ್-ಶಿಫಾ ಆಸ್ಪತ್ರೆಯ ನಿರ್ದೇಶಕರು, ಒಬ್ಬ ವೈದ್ಯ ಹಾಗೂ ಇಬ್ಬರು ನರ್ಸ್ಗಳನ್ನು ಬಂಧಿಸಿರುವುದನ್ನು ಖಂಡಿಸುತ್ತೇವೆ. ಅವರ ತಕ್ಷಣ ಬಿಡುಗಡೆಗಡೆ ಅಂತರಾಷ್ಟ್ರೀಯ ರೆಡ್ಕ್ರಾಸ್ ಸಮಿತಿ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಹಮಾಸ್ ಹೇಳಿದೆ.





