ಅಮೆರಿಕಾದಲ್ಲಿ ಔಷಧಗಳ ಬೆಲೆ ಕಡಿತಕ್ಕೆ ಅಸ್ಟ್ರಾಜೆನೆಕ ಜೊತೆ ಒಪ್ಪಂದ: ಟ್ರಂಪ್

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Photo: PTI)
ವಾಷಿಂಗ್ಟನ್, ಅ.11: ಕೆಲವು ಔಷಧ ಉತ್ಪನ್ನಗಳ ಗ್ರಾಹಕ ಬೆಲೆಯಲ್ಲಿ ಕಡಿತ ಮಾಡುವ ನಿಟ್ಟಿನಲ್ಲಿ ಬ್ರಿಟನ್ ಮೂಲದ ಅಸ್ಟ್ರಾಜೆನೆಕ ಸಂಸ್ಥೆಯ ಜೊತೆ ತಾನು ಒಪ್ಪಂದ ಮಾಡಿಕೊಂಡಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಘೋಷಿಸಿದ್ದಾರೆ.
ಬ್ರಿಟನ್ನ ಅತೀ ದೊಡ್ಡ ಔಷಧೀಯ ತಯಾರಿಕಾ ಸಂಸ್ಥೆ ಅಸ್ಟ್ರಾಜೆನೆಕ ತಾನು ಉತ್ಪಾದಿಸುವ ಔಷಧಿಗಳ ವಿಶಾಲ ಶ್ರೇಣಿಯಲ್ಲಿ ಅಮೆರಿಕನ್ನರಿಗೆ ಪ್ರಮುಖ ರಿಯಾಯಿತಿಯನ್ನು ನೀಡಲು ಬದ್ಧವಾಗಿದೆ ಎಂದು ಶ್ವೇತಭವನದಲ್ಲಿ ನಡೆಸಿದ ಸುದ್ದಿಗೋಷ್ಟಿಯಲ್ಲಿ ಟ್ರಂಪ್ ಹೇಳಿದ್ದಾರೆ.
ಅಸ್ಟ್ರಾಜೆನೆಕ ಸಂಸ್ಥೆಯ ಸಿಇಒ ಪಾಸ್ಕಲ್ ಸೊರಿಯೊಟ್ ಈ ಸಂದರ್ಭ ಉಪಸ್ಥಿತರಿದ್ದರು.
Next Story





