ಜಿಬೌಟಿ ಬಳಿ ವಲಸಿಗರ ದೋಣಿ ಮುಳುಗಿ; ಕನಿಷ್ಠ 109 ಸಾವು, 116 ಮಂದಿ ನಾಪತ್ತೆ

ಸಾಂದರ್ಭಿಕ ಚಿತ್ರ | Photo Credit : chatgpt AI
ಜಿನೀವಾ, ಅ. 11: ಜಿಬೌಟಿ ಕರಾವಳಿಯ ಸಮೀಪ ಶುಕ್ರವಾರ ರಾತ್ರಿ ದೋಣಿಯೊಂದು ಮುಳುಗಿದ ಪರಿಣಾಮ 15 ಮಕ್ಕಳು ಸೇರಿದಂತೆ ಕನಿಷ್ಠ 109 ವಲಸಿಗರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 116 ಮಂದಿ ನಾಪತ್ತೆಯಾಗಿದ್ದಾರೆ ಎಂದು ವಿಶ್ವಸಂಸ್ಥೆಯ ಏಜೆನ್ಸಿಯೊಂದು ರವಿವಾರ ತಿಳಿಸಿದೆ.
ಜಿಬೌಟಿಯಿಂದ ಯೆಮನ್ ಗೆ 350 ಜನರನ್ನು ಹೊತ್ತೊಯ್ಯುತ್ತಿದ್ದ ದೋಣಿಯು ಜಿಬೌಟಿಯ ಒಬೊಕ್ ಪಟ್ಟಣದ ಉತ್ತರ ಭಾಗದಲ್ಲಿರುವ ಗುಹೆರೆ ಎಂಬಲ್ಲಿ ಮುಳುಗಿದೆ. ಪತ್ತೆಯಾದ 109 ಮೃತದೇಹಗಳಲ್ಲಿ 52 ಪುರುಷರು, 42 ಮಹಿಳೆಯರು ಮತ್ತು 15 ಮಕ್ಕಳು ಸೇರಿದ್ದಾರೆ. 80ಕ್ಕೂ ಹೆಚ್ಚು ಮಂದಿ ಪಾರಾಗಿದ್ದು, ಇವರೆಲ್ಲರೂ ಇಥಿಯೋಪಿಯಾ ಪ್ರಜೆಗಳು ಎಂದು ಹೇಳಿಕೆ ತಿಳಿಸಿದೆ.
Next Story




