ಇಸ್ರೇಲ್ ತನ್ನ ಮೂರ್ಖ ಕೃತ್ಯಕ್ಕೆ ವಿಷಾದಿಸುವಂತೆ ಪ್ರಬಲ ಪ್ರತಿಕ್ರಿಯೆ ನೀಡುತ್ತೇವೆ : ಇರಾನ್ ಪ್ರತಿಜ್ಞೆ

Photo I indiatoday
ಟೆಹರಾನ್: ಇಸ್ರೇಲ್ ತನ್ನ ಮೂರ್ಖ ಕೃತ್ಯಕ್ಕೆ ವಿಷಾದಿಸುವಂತೆ ಪ್ರಬಲ ಪ್ರತಿಕ್ರಿಯೆ ನೀಡುತ್ತೇವೆ ಎಂದು ಇಸ್ರೇಲ್ ನಡೆಸಿದ ವಾಯುದಾಳಿಗೆ ಪ್ರಬಲವಾಗಿ ಪ್ರತಿಕ್ರಿಯೆ ನೀಡುವುದಾಗಿ ಇರಾನ್ ಪ್ರತಿಜ್ಞೆ ಮಾಡಿದೆ.
ಇಸ್ರೇಲ್ ಸೇನೆಯು ಇರಾನಿನ ಮಿಲಿಟರಿ ಮತ್ತು ಪರಮಾಣು ಕೇಂದ್ರಗಳು ಹಾಗೂ ಪ್ರಮುಖ ನಗರಗಳ ಮೇಲೆ ದಾಳಿಗಳನ್ನು ಮುಂದುವರಿಸಿದೆ ಎಂದು ವರದಿಯಾಗಿದೆ.
ಇರಾನ್ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ರೆವಲ್ಯೂಷನರಿ ಗಾರ್ಡ್ ಮುಖ್ಯಸ್ಥ ಅಮೀರ್ ಅಲಿ ಹಾಜಿಝಾದೆ ಸೇರಿದಂತೆ ಕನಿಷ್ಠ 20 ಹಿರಿಯ ಇರಾನಿನ ಕಮಾಂಡರ್ಗಳು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿರುವ ಬಗ್ಗೆ ರಾಯಿಟರ್ಸ್ ವರದಿ ಮಾಡಿದೆ.
ಇಸ್ರೇಲ್ ಇರಾನ್ ಮೇಲೆ ದೊಡ್ಡ ಪ್ರಮಾಣದ ವೈಮಾನಿಕ ದಾಳಿಯನ್ನು ನಡೆಸಿದೆ. ಶುಕ್ರವಾರ ಮುಂಜಾನೆ ಟೆಹರಾನ್ನ ಈಶಾನ್ಯದಲ್ಲಿ ಸ್ಫೋಟಗಳು ವರದಿಯಾಗಿವೆ ಎಂದು ಇರಾನ್ನ ಸರಕಾರಿ ಸ್ವಾಮ್ಯದ ನೂರ್ ನ್ಯೂಸ್ ದೃಢಪಡಿಸಿದೆ.
Next Story





