ಇಸ್ರೇಲ್ನ ಅನಿರೀಕ್ಷಿತ ದಾಳಿಯಲ್ಲಿ ಕನಿಷ್ಠ 430 ನಾಗರಿಕರು ಮೃತ್ಯು: ಇರಾನ್ ಆರೋಗ್ಯ ಸಚಿವಾಲಯ

Photo credit: PTI
ಟೆಹರಾನ್ : ಜೂನ್ 13ರಂದು ಇಸ್ರೇಲ್ ಇರಾನ್ ಮೇಲೆ ನಡೆಸಿದ ಅನಿರೀಕ್ಷಿತ ದಾಳಿಯಲ್ಲಿ ಕನಿಷ್ಠ 430 ನಾಗರಿಕರು ಮೃತಪಟ್ಟಿದ್ದಾರೆ ಮತ್ತು 3,500 ಜನರು ಗಾಯಗೊಂಡಿದ್ದಾರೆ ಎಂದು ಇರಾನ್ನ ಆರೋಗ್ಯ ಸಚಿವಾಲಯವನ್ನು ಉಲ್ಲೇಖಿಸಿ ಸರಕಾರಿ ಸ್ವಾಮ್ಯದ ನೂರ್ ನ್ಯೂಸ್ ವರದಿ ಮಾಡಿದೆ.
ಇಸ್ರೇಲ್ ವಾಯುದಾಳಿಗೆ ಇರಾನ್ನಲ್ಲಿ 639 ಜನರು ಮೃತಪಟ್ಟಿದ್ದಾರೆ. ಮೃತರಲ್ಲಿ ಮಿಲಿಟರಿಯ ಉನ್ನತ ಕಮಾಂಡರ್ಗಳು, ಪರಮಾಣು ವಿಜ್ಞಾನಿಗಳು ಸೇರಿದ್ದಾರೆ ಎಂದು ಅಮೆರಿಕ ಮೂಲದ ಮಾನವ ಹಕ್ಕುಗಳ ಸಂಘಟನೆ ಈ ಮೊದಲು ತಿಳಿಸಿತ್ತು.
ಇಸ್ರೇಲ್ ಅಧಿಕಾರಿಗಳ ಪ್ರಕಾರ, ಇರಾನ್ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಇಸ್ರೇಲ್ನಲ್ಲಿ 24 ಮಂದಿ ನಾಗರಿಕರು ಮೃತಪಟ್ಟಿದ್ದಾರೆ.
Next Story





