ಯಮನ್ ಸಂಘರ್ಷ | ಕನಿಷ್ಠ 46,000 ಜನರ ಸ್ಥಳಾಂತರ; ವಿಶ್ವಸಂಸ್ಥೆ

Photo Credit ; un.org
ಜಿನೀವಾ, ಸೆ.11: ಯಮನ್ನಲ್ಲಿ ಕಳೆದ ವಾರ ಯುದ್ಧ ತೀವ್ರಗೊಂಡಾಗಿನಿಂದ ಹತ್ತಾರು ಸಾವಿರ ಜನರು ತಮ್ಮ ಮನೆಗಳನ್ನು ತೊರೆದು ಸ್ಥಳಾಂತರಗೊಂಡಿದ್ದಾರೆ ಎಂದು ವಿಶ್ವಸಂಸ್ಥೆ ಶುಕ್ರವಾರ ತಿಳಿಸಿದೆ.
ವರ್ಷಗಳಿಂದ ಉತ್ತರ ಯಮನ್ನ ಬಹುಭಾಗವನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಂಡಿರುವ ಇರಾನ್ ಬೆಂಬಲಿತ ಹೌದಿಗಳು, ಕಳೆದ ವಾರ ಸೌದಿ ಬೆಂಬಲಿತ ಸರಕಾರಿ ಪಡೆಗಳ ವಿರುದ್ಧ ದೊಡ್ಡ ಪ್ರಮಾಣದ ದಾಳಿಯನ್ನು ಪ್ರಾರಂಭಿಸಿದ್ದಾರೆ.
ಕಾಳಗ ಉಲ್ಬಣಗೊಂಡಾಗಿನಿಂದ ಕನಿಷ್ಠ 46,000 ಜನರು ಸ್ಥಳಾಂತರಗೊಂಡಿದ್ದಾರೆ ಎಂದು ಅಂತರರಾಷ್ಟ್ರೀಯ ವಲಸೆ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದ್ದು, ಈ ಸಂಖ್ಯೆಯು ಆತಂಕಕಾರಿಯಾಗಿ ಏರುತ್ತಿದೆ ಎಂದು ಎಚ್ಚರಿಸಿದೆ.
Next Story




