ಕಾಂಗೋದಲ್ಲಿ ಬಂಡುಕೋರರ ದಾಳಿಗೆ ಕನಿಷ್ಠ 60 ಬಲಿ

ಸಾಂದರ್ಭಿಕ ಚಿತ್ರ
ಕಿನ್ಶಾಸ,ಸೆ.9: ಐಸಿಸ್ ಬೆಂಬಲಿತ ಬಂಡುಕೋರ ಗುಂಪೊಂದು ಪೂರ್ವ ಕಾಂಗೋದಲ್ಲಿ ತಡರಾತ್ರಿ ನಡೆಸಿದ ದಾಳಿಯಲ್ಲಿ ಕನಿಷ್ಠ 60 ಮಂದಿ ಸಾವನ್ನಪ್ಪಿದ್ದಾರೆ.
ಉತ್ತರ ಕೀವು ಪ್ರದೇಶದಲ್ಲಿರುವ ನೊಟೊಯೊ ಎಂಬಲ್ಲಿ ನಡೆದ ಈ ದಾಳಿಯನ್ನು ‘ಆ್ಯಲಿಡ್ ಡೆಮಾಕ್ರಾಟಿಕ್ ಫೋರ್ಸ್ ’ ಎಂಬ ಗುಂಪು ನಡೆಸಿದೆಯೆಂದು ವರದಿಗಳು ತಿಳಿಸಿವೆ. ಅಂತ್ಯಸಂಸ್ಕಾರ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಜನರ ಗುಂಪಿನ ಮೇಲೆ ಬಂಡುಕೋರರು ದಾಳಿ ನಡೆಸಿದ್ದಾರೆ.
ಸಾವಿನ ಸಂಖ್ಯೆ ಇನ್ನೂ ಏರಿಕೆಯಾಗುವ ಸಾಧ್ಯತೆಯಿದೆಯೆಂದು ಸ್ಥಳೀಯಾ ಲ್ಯುಬೆರೊ ಪ್ರಾಂತದ ಆಡಳಿತಾಧಿಕಾರಿ ಕ. ಅಲಾಯಿನ್ ಕಿವೆವಾ ಅವರು ತಿಳಿಸಿದ್ದಾರೆ.
ಸುಮಾರು 10 ಮಂದಿ ಬಂಡುಕೋರರು,, ಖಡ್ಗಗಳಿಂದ ಜನರನ್ನು ಸುತ್ತುವರಿದು, ಒಂದೇ ಸ್ಥಳದಲ್ಲಿ ಸೇರುವಂತೆ ಆದೇಶಿಸಿದ್ದು, ಅವರನ್ನು ಮಚ್ಚುಗಳಿಂದ ಕಡಿದು ಹತ್ಯೆಗೈದಿದ್ದಾರೆಂದು ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.
Next Story





