Lebanon | ಇಸ್ರೇಲ್ ದಾಳಿಯಲ್ಲಿ ಕನಿಷ್ಠ 9 ಮಂದಿ ಮೃತ್ಯು

Photo : gemini AI
ಬೈರೂತ್, ಜೂ. 3: ದಕ್ಷಿಣ ಲೆಬನಾನ್ ನಲ್ಲಿ ಬುಧವಾರ ಇಸ್ರೇಲ್ ನಡೆಸಿದ ದಾಳಿಯಲ್ಲಿ ಇಬ್ಬರು ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಕನಿಷ್ಠ 9 ಮಂದಿ ಮೃತಪಟ್ಟಿರುವುದಾಗಿ ಲೆಬನಾನ್ ಆರೋಗ್ಯ ಇಲಾಖೆ ತಿಳಿಸಿದೆ.
ಹಿಜ್ಬುಲ್ಲಾ ಜತೆ ಗುರುತಿಸಿಕೊಂಡಿರುವ ರಿಸಾಲಾ ಸ್ಕೌಟ್ಸ್ ಅಸೋಸಿಯೇಷನ್ಗೆ ಸೇರಿದ ಆಂಬುಲೆನ್ಸ್ ಅನ್ನು ನೇರವಾಗಿ ಗುರಿಯಾಗಿಸಿಕೊಂಡು ಇಸ್ರೇಲ್ ದಾಳಿ ನಡೆಸಿದ್ದು, ಇಬ್ಬರು ವೈದ್ಯಕೀಯ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಮತ್ತೊಬ್ಬ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಪ್ರತ್ಯೇಕ ದಾಳಿಗಳಲ್ಲಿ ಇತರ ಏಳು ಮಂದಿ ಮೃತಪಟ್ಟಿದ್ದಾರೆ.
ಈ ಮಧ್ಯೆ, ಲೆಬನಾನ್ ಕಡೆಯಿಂದ ಇಸ್ರೇಲಿ ಪ್ರದೇಶದತ್ತ ಧಾವಿಸುತ್ತಿದ್ದ ಶತ್ರುಗಳ ಯುದ್ಧವಿಮಾನ ಹಾಗೂ ಎರಡು ಡ್ರೋನ್ಗಳನ್ನು ಹೊಡೆದುರುಳಿಸಿರುವುದಾಗಿ ಇಸ್ರೇಲಿ ಮಿಲಿಟರಿ ಹೇಳಿದೆ.
ದಕ್ಷಿಣ ಲೆಬನಾನ್ ಮೇಲೆ ದಾಳಿ ನಡೆಸಿದ ಇಸ್ರೇಲಿ ಪಡೆಗಳ ವಿರುದ್ಧ ಪ್ರತಿದಾಳಿ ನಡೆಸಿರುವುದಾಗಿ ಹಿಜ್ಬುಲ್ಲಾ ಪ್ರತಿಪಾದಿಸಿದೆ.
Next Story




