ಹಾರ್ಮುಝ್ನಲ್ಲಿ 2 ಟ್ಯಾಂಕರ್ ಗಳ ಮೇಲೆ ದಾಳಿ

Photo Credit : PTI
ದುಬೈ, ನ.21: ಹಾರ್ಮುಝ್ ಜಲಸಂಧಿಯಲ್ಲಿ ಶನಿವಾರ ಎರಡು ತೈಲ ಟ್ಯಾಂಕರ್ ಗಳ ಮೇಲೆ ದಾಳಿ ನಡೆದಿದೆ ಇಂದು ಬ್ರಿಟಿಷ್ ಕಡಲ ಸಂಸ್ಥೆ UKMTO ತಿಳಿಸಿದೆ. ಇದೇ ವೇಳೆ ಹಡಗೊಂದಕ್ಕೆ ಬೆಂಕಿ ಹೊತ್ತಿಕೊಂಡಿದೆ ಇಂದು ಇರಾನ್ ಹೇಳಿದೆ.
ಹಾರ್ಮುಝ್ ಜಲಸಂಧಿಯಿಂದ ಹೊರಹೋಗುತ್ತಿದ್ದ ಟ್ಯಾಂಕರ್ ನ ಹಿಂಭಾಗಕ್ಕೆ ಅಪರಿಚಿತ ಕ್ಷಿಪಣಿಯೊಂದು ಬಡಿದಿದೆ. ಮತ್ತೊಂದು ಟ್ಯಾಂಕರ್ ನ ಇಂಜಿನ್ ಕೋಣೆಗೆ ದಾಳಿಯಾಗಿದೆ. ಈವರೆಗೆ ಯಾವುದೇ ಸಾವು-ನೋವುಗಳು ವರದಿಯಾಗಿಲ್ಲ ಇಂದು ಸಂಸ್ಥೆ ತಿಳಿಸಿದೆ. ಜಲಸಂಧಿಯ ಪೂರ್ವಕ್ಕೆ ಇರುವ ನಿರ್ಬಂಧಿತ ವಲಯವನ್ನು ಪ್ರವೇಶಿಸಿದ ನಿಯಮ ಉಲ್ಲಂಘಿಸಿದ ತೈಲ ಟ್ಯಾಂಕರ್ ಒಂದು ಸಮುದ್ರದಡಿಯ ಸ್ಫೋಟಕಕ್ಕೆ ಡಿಕ್ಕಿ ಹೊಡೆದ ನಂತರ ಹಡಗಿಗೆ ಬೆಂಕಿ ಹೊತ್ತಿಕೊಂಡಿದೆ ಇಂದು ಇರಾನ್ ಸೇನೆ ಶನಿವಾರ ತಿಳಿಸಿದೆ.
Next Story




