ಬಲೂಚಿಸ್ತಾನದಲ್ಲಿ ಸೇನಾ ವಾಹನಗಳ ಮೇಲೆ ದಾಳಿ: 7 ಭದ್ರತಾ ಸಿಬ್ಬಂದಿ ಮೃತ್ಯು

Photo Credit : news18.com
ಕ್ವೆಟಾ, ಆ. 20: ಬಲೂಚಿಸ್ತಾನದ ನುಷ್ಕಿ ಜಿಲ್ಲೆಯಲ್ಲಿ ಪಾಕಿಸ್ತಾನದ ಮಿಲಿಟರಿ ವಾಹನಗಳ ಸಾಲನ್ನು ಗುರಿಯಾಗಿಸಿಕೊಂಡು ನಡೆದ ದಾಳಿಯಲ್ಲಿ 7 ಭದ್ರತಾ ಸಿಬ್ಬಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.
ನುಷ್ಕಿ ಪ್ರದೇಶದಲ್ಲಿ ಪಾಕಿಸ್ತಾನಿ ಮಿಲಿಟರಿ ವಾಹನಗಳ ಮೇಲೆ ತನ್ನ ಹೋರಾಟಗಾರರು ಹೊಂಚುದಾಳಿ ನಡೆಸಿದ್ದು, ಏಳು ಪಾಕಿಸ್ತಾನಿ ಭದ್ರತಾ ಸಿಬ್ಬಂದಿ ಹತರಾಗಿದ್ದಾರೆ. ಎಂಟಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಗುಂಡಿನ ಚಕಮಕಿಯ ಸಮಯದಲ್ಲಿ ಪಾಕಿಸ್ತಾನಿ ಪಡೆಗಳು ಬಳಸಿದ ಡ್ರೋನ್ಗಳನ್ನು ಹೊಡೆದುರುಳಿಸಲಾಗಿದೆ ಎಂದು ಬಲೂಚ್ ಸಶಸ್ತ್ರ ಹೋರಾಟಗಾರರ ಸಂಘಟನೆ ಪ್ರತಿಪಾದಿಸಿದೆ.
Next Story




