ಹಾರ್ಮುಝ್ನಲ್ಲಿ ಎಲ್ಪಿಜಿ ಟ್ಯಾಂಕರ್ ಮೇಲೆ ದಾಳಿ: ಇರಾನ್ ಪ್ರತಿಪಾದನೆ

ಸಾಂದರ್ಭಿಕ ಚಿತ್ರ | Photo Credit : PTI
ಟೆಹರಾನ್: ಹಾರ್ಮುಝ್ ಜಲಸಂಧಿಯ ಮೂಲಕ ಅಕ್ರಮವಾಗಿ ಹಾದುಹೋಗಲು ಯತ್ನಿಸುತ್ತಿದ್ದ ದ್ರವೀಕೃತ ಪೆಟ್ರೋಲಿಯಂ ಗ್ಯಾಸ್ (ಎಲ್ಪಿಜಿ) ಟ್ಯಾಂಕರ್ ಅನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿರುವುದಾಗಿ ಇರಾನ್ ನೌಕಾಪಡೆ ಶುಕ್ರವಾರ ಪ್ರತಿಪಾದಿಸಿದೆ.
ದಾಳಿಯ ನಂತರ ಟ್ಯಾಂಕರ್ನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಯುದ್ಧದ ಮೊದಲ ದಿನದಿಂದಲೂ ಐಆರ್ಜಿಸಿ ನೌಕಾಪಡೆಯು ಜಲಸಂಧಿಯ ಮೇಲೆ ಸಂಪೂರ್ಣ ಮತ್ತು ಪರಿಪೂರ್ಣ ನಿಗಾ ವಹಿಸಿದೆ. ಇರಾನ್ನ ನಿಯಮಗಳನ್ನು ಉಲ್ಲಂಘಿಸಿ ಹಾರ್ಮುಝ್ ಜಲಸಂಧಿಯ ಮೂಲಕ ಹಾದುಹೋಗುವ ಹಡಗುಗಳಿಗೆ `ಶಿಕ್ಷೆ ನೀಡಲಾಗುವುದು ಎಂದು ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾಪ್ರ್ಸ್ (ಐಆರ್ಜಿಸಿ) ಎಚ್ಚರಿಸಿದೆ.
ಈ ಮಧ್ಯೆ, ಶುಕ್ರವಾರ ಯುಎಇ ಬಳಿ ಅಪರಿಚಿತ ಕ್ಷಿಪಣಿ ಹಡಗೊಂದಕ್ಕೆ ಅಪ್ಪಳಿಸಿದ್ದು, ಬೆಂಕಿ ಕಾಣಿಸಿಕೊಂಡಿತ್ತು. ನಂತರ ಅದನ್ನು ನಂದಿಸಲಾಯಿತು ಎಂದು ಮೂಲಗಳನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ. ಈ ಎರಡೂ ಘಟನೆಗಳಿಗೆ ಪರಸ್ಪರ ಸಂಬಂಧವಿದೆಯೇ ಎಂಬುದು ಸ್ಪಷ್ಟವಾಗಿಲ್ಲ.




