ಆಸ್ಟ್ರೇಲಿಯಾ | ಭಾರತದ ಸ್ವಾತಂತ್ರ್ಯ ದಿನಾಚರಣೆಗೆ ಖಾಲಿಸ್ತಾನ್ ಪರ ಪ್ರತಿಭಟನಾಕಾರರ ಅಡ್ಡಿ

PC : NDTV
ಸಿಡ್ನಿ, ಆ.15: ಭಾರತದ 79ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಆಸ್ಟ್ರೇಲಿಯಾದ ಮೆಲ್ಬೋರ್ನ್ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಖಾಲಿಸ್ತಾನ್ ಬೆಂಬಲಿಗರ ಗುಂಪೊಂದು ಅಡ್ಡಿಪಡಿಸಿರುವುದಾಗಿ `ದಿ ಆಸ್ಟ್ರೇಲಿಯಾ ಟುಡೆ' ವರದಿ ಮಾಡಿದೆ.
ಮೆಲ್ಬೋರ್ನ್ನಲ್ಲಿ ಭಾರತೀಯ ದೂತಾವಾಸದ ಹೊರಗೆ ಘಟನೆ ಸಂಭವಿಸಿದೆ. ಭಾರತೀಯ ಸಮುದಾಯದವರು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಅರಳಿಸಿ ದೇಶಭಕ್ತಿಯ ಹಾಡುಗಳನ್ನು ಹಾಡುತ್ತಿದ್ದಾಗ ಆ ಪ್ರದೇಶಕ್ಕೆ ಬಂದ ಖಾಲಿಸ್ತಾನ್ ಬೆಂಬಲಿಗರ ಗುಂಪೊಂದು ಖಾಲಿಸ್ತಾನ್ ಧ್ವಜವನ್ನು ಬೀಸುತ್ತಾ ಪ್ರತಿಭಟನೆ ನಡೆಸಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಎರಡೂ ಗುಂಪಿನ ನಡುವೆ ಮಾತಿನ ಚಕಮಕಿ ನಡೆದಿದ್ದು ಸ್ಥಳಕ್ಕೆ ಆಗಮಿಸಿದ ಭದ್ರತಾ ಸಿಬ್ಬಂದಿ ಪರಿಸ್ಥಿತಿಯನ್ನು ನಿಯಂತ್ರಿಸಿದರು ಎಂದು ವರದಿ ಹೇಳಿದೆ.
Next Story





