ಆಸ್ಟ್ರೇಲಿಯಾ | ವೀಸಾ ಶುಲ್ಕ ಮತ್ತೆ ಏರಿಕೆ

ಸಾಂದರ್ಭಿಕ ಚಿತ್ರ | Photo Credit : magnific.com
ಸಿಡ್ನಿ, ಜು.10: ಆಸ್ಟ್ರೇಲಿಯಾದಲ್ಲಿ ವ್ಯಾಸಂಗ ಮಾಡಲು ಯೋಜಿಸುತ್ತಿರುವ ಭಾರತೀಯ ವಿದ್ಯಾರ್ಥಿಗಳು ಇನ್ನು ಮುಂದೆ ಹೆಚ್ಚಿನ ಆರಂಭಿಕ ವೆಚ್ಚಗಳನ್ನು ಭರಿಸಬೇಕಾಗುತ್ತದೆ. ಆಸ್ಟ್ರೇಲಿಯಾ ಸರಕಾರವು ತನ್ನ ಸಾಮಾನ್ಯ ವಿದ್ಯಾರ್ಥಿ ವೀಸಾ ಅರ್ಜಿ ಶುಲ್ಕವನ್ನು 2,000 ಆಸ್ಟೇಲಿಯನ್ ಡಾಲರ್ನಿಂದ 2,500 ಆಸ್ಟ್ರೇಲಿಯನ್ ಡಾಲರ್ಗೆ ಹೆಚ್ಚಿಸಿದ್ದು, ಇದು ಜುಲೈ 2026ರಿಂದ ಜಾರಿಗೆ ಬರಲಿದೆ.
ಇದು ಕಳೆದ ಎರಡು ವರ್ಷಗಳಲ್ಲಿ ನಡೆದಿರುವ ಎರಡನೇ ವೀಸಾ ಶುಲ್ಕ ಏರಿಕೆಯಾಗಿದೆ. ಈ ಪರಿಷ್ಕರಣೆಯೊಂದಿಗೆ, ಕೇವಲ ಎರಡು ವರ್ಷಗಳಲ್ಲಿ ವೀಸಾ ಶುಲ್ಕವು ಶೇಕಡಾ 56 ಕ್ಕಿಂತ ಹೆಚ್ಚು ಏರಿಕೆ ಕಂಡಿದೆ. ಇದು ಅಂತರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಆಸ್ಟ್ರೇಲಿಯಾವನ್ನು ಅತ್ಯಂತ ದುಬಾರಿ ದೇಶಗಳಲ್ಲಿ ಒಂದನ್ನಾಗಿ ಮಾಡಿದೆ.
Next Story




