ಇಸ್ರೇಲ್ ವಿಮಾನಗಳಲ್ಲಿ ಪಾಕಿಸ್ತಾನ ಸೇರಿ 29 ದೇಶಗಳ ಪೈಲಟ್ಗಳಿಗೆ ನಿರ್ಬಂಧ

ಸಾಂದರ್ಭಿಕ ಚಿತ್ರ | Photo Credit : magnific.com
ಟೆಲ್ ಅವೀವ್: ಟೆಲ್ ಅವೀವ್ಗೆ ಮತ್ತು ಅಲ್ಲಿಂದ ಕಾರ್ಯನಿರ್ವಹಿಸುವ ವಿಮಾನಗಳಲ್ಲಿ ಕೆಲವು ನಿರ್ದಿಷ್ಟ ದೇಶಗಳ ವಿಮಾನ ಸಿಬ್ಬಂದಿಯನ್ನು ನಿರ್ಬಂಧಿಸುವ ಇಸ್ರೇಲ್ನ ನಿಯಮಗಳಿಗೆ ಬದ್ಧವಾಗಿರಲು ಏರ್ ಫ್ರಾನ್ಸ್ (ಫ್ರಾನ್ಸ್), ಯುನೈಟೆಡ್ ಏರ್ಲೈನ್ಸ್ (ಅಮೆರಿಕ) ಮತ್ತು ಸ್ಮಾರ್ಟ್ವಿಂಗ್ಸ್ (ಜೆಕ್ ಗಣರಾಜ್ಯ) ಸಂಸ್ಥೆಗಳು ಮುಂದಾಗಿವೆ.
ವಿಮಾನಯಾನ ಮಾಹಿತಿ ಸಂಸ್ಥೆ `ಸಿಎಚ್-ಏವಿಯೇಷನ್' ಪ್ರಕಾರ, ಇಸ್ರೇಲ್ ವಿಧಿಸಿರುವ ಈ ನಿರ್ಬಂಧಗಳಿಂದಾಗಿ ವಿಮಾನ ಸೇವೆಗಳನ್ನು ಒದಗಿಸದಂತೆ ತಡೆಯಬಹುದಾದ 29 ದೇಶಗಳ ಪಟ್ಟಿಯಲ್ಲಿ ಪಾಕಿಸ್ತಾನವೂ ಸೇರಿದೆ. ಇಸ್ರೇಲ್ನೊಂದಿಗೆ ರಾಜತಾಂತ್ರಿಕ ಬಾಂಧವ್ಯ ಹೊಂದಿಲ್ಲದ ದೇಶಗಳು ಈ ಪಟ್ಟಿಯಲ್ಲಿದ್ದು, ವರದಿಗಳ ಪ್ರಕಾರ ಈ ನಿಯಮಗಳು ಸಂಬಂಧಪಟ್ಟ ದೇಶಗಳ ಪೌರತ್ವ ಅಥವಾ ದ್ವಿಪೌರತ್ವ ಹೊಂದಿರುವ ವಿಮಾನ ಸಿಬ್ಬಂದಿಗೆ ಅನ್ವಯಿಸುತ್ತವೆ.
Next Story




