ಥೈಲ್ಯಾಂಡ್ ನ ಪ್ರಸಿದ್ಧ ಸಾಕುಪ್ರಾಣಿ ಮಾರ್ಕೆಟ್ ನಲ್ಲಿ ಬೆಂಕಿ ದುರಂತ: ಹಲವು ಪ್ರಾಣಿಗಳ ಸಾವು
![ಥೈಲ್ಯಾಂಡ್ ನ ಪ್ರಸಿದ್ಧ ಸಾಕುಪ್ರಾಣಿ ಮಾರ್ಕೆಟ್ ನಲ್ಲಿ ಬೆಂಕಿ ದುರಂತ: ಹಲವು ಪ್ರಾಣಿಗಳ ಸಾವು ಥೈಲ್ಯಾಂಡ್ ನ ಪ್ರಸಿದ್ಧ ಸಾಕುಪ್ರಾಣಿ ಮಾರ್ಕೆಟ್ ನಲ್ಲಿ ಬೆಂಕಿ ದುರಂತ: ಹಲವು ಪ್ರಾಣಿಗಳ ಸಾವು](https://www.varthabharati.in/h-upload/2024/06/11/1271531-ban.webp)
PC : NDTV
ಬ್ಯಾಂಕಾಕ್: ಬ್ಯಾಂಕಾಕ್ನ ಪ್ರಸಿದ್ಧ ಸಾಕುಪ್ರಾಣಿ ಮಾರುಕಟ್ಟೆ ಚಟುಚಾಕ್ನಲ್ಲಿ ಮಂಗಳವಾರ ಬೆಳಿಗ್ಗೆ ಸಂಭವಿಸಿದ ಬೆಂಕಿ ದುರಂತದಲ್ಲಿ 100ಕ್ಕೂ ಅಧಿಕ ಅಂಗಡಿಗಳು ಸುಟ್ಟುಹೋಗಿದ್ದು ಪಂಜರದಲ್ಲಿ ಇರಿಸಲಾಗಿದ್ದ ನಾಯಿ, ಬೆಕ್ಕುಗಳು, ಪಕ್ಷಿಗಳು, ಹಾವುಗಳ ಸಹಿತ ನೂರಾರು ಪ್ರಾಣಿಗಳು ಸಾವನ್ನಪ್ಪಿವೆ ಎಂದು ಪೊಲೀಸರು ಹೇಳಿದ್ದಾರೆ.
ಚಟುಚಾಕ್ ಮಾರುಕಟ್ಟೆಯ ಆಲಂಕರಿಕ ಮೀನುಗಳ ವಿಭಾಗದಲ್ಲಿ ಸ್ಥಳೀಯ ಕಾಲಮಾನ ಬೆಳಿಗ್ಗೆ 4 ಗಂಟೆಗೆ ಬೆಂಕಿ ಕಾಣಿಸಿಕೊಂಡಿದ್ದು ಕ್ಷಿಪ್ರವಾಗಿ 14,000 ಚದರಡಿ ಪ್ರದೇಶದ 100ಕ್ಕೂ ಅಧಿಕ ಸ್ಟಾಲ್ಗಳಿಗೆ ವ್ಯಾಪಿಸಿದೆ. ಮನುಷ್ಯರು ಸಾವನ್ನಪ್ಪಿದ ಅಥವಾ ಗಾಯಗೊಂಡ ಬಗ್ಗೆ ವರದಿಯಾಗಿಲ್ಲ. ಆದರೆ ಪಂಜರದಲ್ಲಿಟ್ಟಿದ್ದ ಹಲವು ಸಾಕುಪ್ರಾಣಿಗಳು ಸಾವನ್ನಪ್ಪಿವೆ. ಸುಮಾರು 2 ಗಂಟೆಗಳ ಕಾರ್ಯಾಚರಣೆಯ ಬಳಿಕ ಬೆಂಕಿಯನ್ನು ನಿಯಂತ್ರಿಸಲಾಗಿದ್ದು ದುರಂತದ ಬಗ್ಗೆ ತನಿಖೆಗೆ ಆದೇಶಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
Next Story