ಬಾಂಗ್ಲಾ |ದೇಶದ್ರೋಹದ ಆರೋಪದಡಿ ನಟಿ ಮೆಹರ್ ಅಫ್ರೋಝ್ ಬಂಧನ

Photo Credit | Instagram/meherafrozshaon
ಢಾಕ: ಮುಹಮ್ಮದ್ ಯೂನುಸ್ ನೇತೃತ್ವದ ಬಾಂಗ್ಲಾದೇಶದ ಮಧ್ಯಂತರ ಸರಕಾರವನ್ನು ಟೀಕಿಸಿದ್ದ ನಟಿ ಮೆಹರ್ ಅಫ್ರೋಝ್ ಶಾನ್ ರನ್ನು ದೇಶದ್ರೋಹದ ಆರೋಪದಡಿ ಪೊಲೀಸರು ಬಂಧಿಸಿದ್ದಾರೆ.
ಜಮಾಲ್ಪುರದ ನೊರುಂಡಿ ರೈಲು ನಿಲ್ದಾಣದ ಬಳಿಯಿರುವ ಮೆಹರ್ ಅಫ್ರೋಝ್ ಅವರ ಕುಟುಂಬದ ಮನೆಯನ್ನು ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಪ್ರತಿಭಟನಾಕಾರರು ಬೆಂಕಿಹಚ್ಚಿ ಸುಟ್ಟುಹಾಕಿದ್ದರು. ಮೆಹರ್ ಹಾಗೂ ಅವರ ಕುಟುಂಬ ಉಚ್ಛಾಟಿತ ಪ್ರಧಾನಿ ಶೇಖ್ ಹಸೀನಾ ಅವರ ಅವಾಮಿ ಲೀಗ್ ಪಕ್ಷದ ಜತೆ ಗುರುತಿಸಿಕೊಂಡಿದ್ದಾರೆ. `ಮಧ್ಯಂತರ ಸರಕಾರವನ್ನು ಟೀಕಿಸಿದ್ದ ನಟಿ ಮೆಹರ್ ಅಫ್ರೋಝ್ ರನ್ನು ದೇಶದ್ರೋಹದ ಆರೋಪದಡಿ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
Next Story





