ಬಾಂಗ್ಲಾದೇಶ | ಫೆಬ್ರವರಿಯಲ್ಲಿ ಚುನಾವಣೆ ಜೊತೆಯಲ್ಲಿ ಜನಾಭಿಪ್ರಾಯ ಸಂಗ್ರಹ

ಸಾಂದರ್ಭಿಕ ಚಿತ್ರ | Photo Credit : NDTV
ಢಾಕ, ನ.13: ಮುಂದಿನ ವರ್ಷದ ಫೆಬ್ರವರಿಯಲ್ಲಿ ದೇಶದಲ್ಲಿ ಚುನಾವಣೆಯ ಜೊತೆಗೆ ಜನಾಭಿಪ್ರಾಯ ಸಂಗ್ರಹ ನಡೆಸುವುದಾಗಿ ಬಾಂಗ್ಲಾದೇಶದ ಮಧ್ಯಂತರ ಸರಕಾರದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನುಸ್ ಗುರುವಾರ ಘೋಷಿಸಿದ್ದಾರೆ.
`ಎಲ್ಲಾ ವಿಷಯಗಳನ್ನು ಪರಿಶೀಲಿಸಿದ ಬಳಿಕ ನಾವು ಮುಂಬರುವ ರಾಷ್ಟ್ರೀಯ ಚುನಾವಣೆಯ ದಿನದಂದೇ ಜನಾಭಿಪ್ರಾಯ ಸಂಗ್ರಹಣೆ ನಡೆಸುವ ಬಗ್ಗೆ ನಿರ್ಧಾರ ಕೈಗೊಂಡಿದ್ದೇವೆ. ಇದು ಸುಧಾರಣೆಗಳ ಗುರಿಗೆ ಯಾವುದೇ ರೀತಿಯಲ್ಲಿ ಅಡ್ಡಿಯಾಗುವುದಿಲ್ಲ ಎಂದು ಯೂನುಸ್ ಹೇಳಿದ್ದಾರೆ.
ಜನಾಭಿಪ್ರಾಯ ಸಂಗ್ರಹದ ವಿಷಯವು ಬಾಂಗ್ಲಾದೇಶದಲ್ಲಿ ರಾಜಕೀಯ ವಿವಾದದ ವಸ್ತುವಾಗಿದ್ದು ತೀವ್ರವಾದಿ ಪಕ್ಷ `ಜಮಾತೆ ಇಸ್ಲಾಮಿ ಬಾಂಗ್ಲಾದೇಶ' ಜನಾಭಿಪ್ರಾಯ ಸಂಗ್ರಹಕ್ಕೆ ಒತ್ತಾಯಿಸುತ್ತಿದ್ದರೆ ಪ್ರಮುಖ ವಿರೋಧ ಪಕ್ಷ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ(ಬಿಎನ್ಪಿ) ವಿರೋಧಿಸುತ್ತಿದೆ.
Next Story





