Bangladesh: ಯೂನುಸ್ ಅವರ ವಿಶೇಷ ಸಹಾಯಕ ಚೌಧರಿ ರಾಜೀನಾಮೆ

ಮುಹಮ್ಮದ್ ಯೂನುಸ್ | Photo Credit: PTI
ಢಾಕ, ಡಿ.25: ಬಾಂಗ್ಲಾ ಮಧ್ಯಂತರ ಸರಕಾರದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನುಸ್ ಅವರ ವಿಶೇಷ ಕಾರ್ಯದರ್ಶಿ(ಗೃಹ ಇಲಾಖೆ) ಖೋಡಾ ಬಕ್ಷ್ ಚೌಧರಿ ತನ್ನ ಹುದ್ದೆಗೆ ರಾಜೀನಾಮೆ ನೀಡಿರುವುದಾಗಿ ವರದಿಯಾಗಿದೆ.
ಮಾಜಿ ಐಜಿಪಿ ಆಗಿದ್ದ ಚೌಧರಿಯನ್ನು 2024ರ ನವೆಂಬರ್ 10ರಂದು ಯೂನುಸ್ ಅವರ ವಿಶೇಷ ಸಹಾಯಕರಾಗಿ ನೇಮಿಸಲಾಗಿತ್ತು. ಅವರ ರಾಜೀನಾಮೆಯನ್ನು ಅಧ್ಯಕ್ಷ ಮುಹಮ್ಮದ್ ಶಹಾಬುದ್ದೀನ್ ಅಂಗೀಕರಿಸಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇದುವರೆಗೆ ಯೂನುಸ್ ಸರಕಾರಕ್ಕೆ ಮೂವರು ಸಲಹೆಗಾರರು ರಾಜೀನಾಮೆ ಸಲ್ಲಿಸಿದಂತಾಗಿದೆ.
ಈ ಮಧ್ಯೆ, ಬುಧವಾರ ಢಾಕಾದ ಮೊಘ್ ಬಝಾರ್ ಪ್ರದೇಶದಲ್ಲಿ ಕಚ್ಛಾ ಬಾಂಬ್ ಸ್ಫೋಟದಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿರುವುದಾಗಿ ಪೊಲೀಸರು ಹೇಳಿದ್ದಾರೆ.
Next Story





