ಬಾಂಗ್ಲಾದೇಶದ ಮೊದಲ ಪರಮಾಣು ವಿದ್ಯುತ್ ಸ್ಥಾವರಕ್ಕೆ ಇಂಧನ ಲೋಡಿಂಗ್ ಪ್ರಾರಂಭ

Image credit : Bangladesh Atomic Energy Commission
ಢಾಕ, ಎ.28: ರಷ್ಯ ನಿರ್ಮಿತ ರೂಪ್ಪುರ ಸ್ಥಾವರದಲ್ಲಿ ಯುರೇನಿಯಂ ಇಂಧನವನ್ನು ಲೋಡ್ ಮಾಡುವ ಪ್ರಕ್ರಿಯೆಗೆ ಮಂಗಳವಾರ ಬಾಂಗ್ಲಾದೇಶ ಚಾಲನೆ ನೀಡಿದ್ದು ಪರಮಾಣು ಇಂಧನ ಉತ್ಪಾದನೆಯತ್ತ ಪ್ರಮುಖ ಹೆಜ್ಜೆಯನ್ನು ಇರಿಸಿದೆ.
2,400 ಮೆಗಾವ್ಯಾಟ್ ರೂಪ್ಪುರ್ ಪರಮಾಣು ಸ್ಥಾವರದಲ್ಲಿ ನಡೆದ ಇಂಧನ ಲೋಡಿಂಗ್ ಕಾರ್ಯಕ್ರಮದಲ್ಲಿ ಬಾಂಗ್ಲಾದೇಶ ಮತ್ತು ರಷ್ಯದ ಅಧಿಕಾರಿಗಳು ಉಪಸ್ಥಿತರಿದ್ದರು. ಅಂತಾರಾಷ್ಟ್ರೀಯ ಪರಮಾಣು ಇಂಧನ ಏಜೆನ್ಸಿ(ಐಎಇಎ)ಯ ಪ್ರಧಾನ ನಿರ್ದೇಶಕ ರಾಫೆಲ್ ಗ್ರಾಸ್ಸಿ ಅವರ ಧ್ವನಿಮುದ್ರಿತ ಸಂದೇಶವನ್ನು ಪ್ರಸಾರ ಮಾಡಲಾಗಿದೆ. ರಷ್ಯದ ಆರ್ಥಿಕ ಮತ್ತು ತಂತ್ರಜ್ಞಾನದ ನೆರವು ಪಡೆದಿರುವ ರೂಪ್ಪುರ ಪರಮಾಣು ಇಂಧನ ಸ್ಥಾವರವು ಬಾಂಗ್ಲಾದೇಶದ ಅತೀ ದೊಡ್ಡ ಇಂಧನ ಮೂಲಸೌಕರ್ಯ ಯೋಜನೆಯಾಗಿದೆ.
Next Story




