ದಂಗೆ ಪ್ರಯತ್ನ ವಿಫಲ; ಪರಿಸ್ಥಿತಿ ನಿಯಂತ್ರಣದಲ್ಲಿ: ಬೆನಿನ್ ಅಧ್ಯಕ್ಷ ತಲೋನ್

Photo Credit : aljazeera.com
ಪೋರ್ಟೊ-ನೊವೊ, ಡಿ.8: ಪಶ್ಚಿಮ ಆಫ್ರಿಕಾದ ಬೆನಿನ್ ರಾಷ್ಟ್ರದಲ್ಲಿ ರವಿವಾರ ಯೋಧರ ಗುಂಪೊಂದು ನಡೆಸಿದ ದಂಗೆಯ ಪ್ರಯತ್ನವನ್ನು ದೇಶನಿಷ್ಠ ಸೈನಿಕರ ಬೆಂಬಲದಿಂದ ವಿಫಲಗೊಳಿಸಲಾಗಿದ್ದು ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ ಎಂದು ಅಧ್ಯಕ್ಷ ಪ್ಯಾಟ್ರಿಸ್ ತಲೊನ್ ಹೇಳಿದ್ದಾರೆ.
ಈ ಮಧ್ಯೆ, ಬೆನಿನ್ಗೆ ನೆರೆದೇಶ ನೈಜೀರಿಯಾ ಮಿಲಿಟರಿ ಸಹಾಯ ಘೋಷಿಸಿದ್ದು ರವಿವಾರ ಸಂಜೆ ನೈಜೀರಿಯಾದ ವಿಮಾನಗಳು ಬೆನಿನ್ ನಲ್ಲಿ ಬಹಿರಂಗಪಡಿಸದ ಗುರಿಗಳ ಮೇಲೆ ದಾಳಿ ನಡೆಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಎಎಫ್ಪಿ ಸುದ್ದಿಸಂಸ್ಥೆ ವರದಿ ಮಾಡಿದೆ. ಸರಕಾರಕ್ಕೆ ನೆರವಾಗಲು ಘಾನಾ, ಐವರಿ ಕೋಸ್ಟ್, ನೈಜೀರಿಯಾ ಮತ್ತು ಸಿಯೆಲಾ ಲಿಯೊನ್ ದೇಶಗಳ ಪಡೆಗಳನ್ನು ನಿಯೋಜಿಸಲಾಗುತ್ತದೆ ಎಂದು ಪಶ್ಚಿಮ ಆಫ್ರಿಕಾದ ಪ್ರಾದೇಶಿಕ ಗುಂಪು `ಇಕೊವಾಸ್' ಹೇಳಿದೆ.
ದಂಗೆಯ ಸೂತ್ರಧಾರರು ಸೇರಿದಂತೆ ಸುಮಾರು 15 ಯೋಧರನ್ನು ಬಂಧಿಸಲಾಗಿದೆ. ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು ಸೇನಾಪಡೆಯ ಮೂಲಗಳೂ ಘೋಷಿಸಿವೆ.
Next Story





